ಸಾಲಬಾದೆ ನೇಣು ಬಿಗಿದು ಕೊಂಡು ರೈತ .

ಸಾಲಬಾದೆ ನೇಣು ಬಿಗಿದು ಕೊಂಡು ರೈತ ಬಂದ ಕುಂಟೆ ಕೃಷ್ಣಪ್ಪ(64)ಆತ್ಮಹತ್ಯೆ.

 

 

ತುಮಕೂರು -ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಬಂದಕುಂಟೆ ಗ್ರಾಮದ ರೈತ ಕೃಷ್ಣಪ್ಪ (64) ಸರ್ವೆ ನಂ : 111 ರಲ್ಲಿ 1.08 ಎಕರೆ ನೀರಾವರಿ ಭೂಮಿ ಹೊಂದಿದ್ದ, ಏಳು ಕೊಳವೆಬಾವಿ ಕೂರಸಿ ವಿಫಲವಾಗಿ, ಒಂದು ಕೊಳವೆ ಬಾವಿಯಲ್ಲಿ ಮಾತ್ರ ನೀರು ಬರುತ್ತಿತ್ತು.

 

 

 

 

ಬೇಸಿಗೆ ಮಳೆಯ ಅಭಾವ ಸಾಲಬಾಧೆ ರೈತ ಕೃಷ್ಣಪ್ಪನನ್ನು ಆತಂಕಕ್ಕೆ ಈಡು ಮಾಡಿತ್ತು, ಮಾಡಿದ ಸಾಲ ಹೇಗೆ ತೀರಿಸೋದು ಎಂದು ಮನನೊಂದು ಶನಿವಾರ ತನ್ನ ಜಮೀನಿನಲ್ಲಿರುವ ವಿದ್ಯುತ್ ಕಂಬಕ್ಕೆ ನೀಡಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

 

 

ಪಟ್ಟನಾಯಕನಹಳ್ಳಿ ಕೆನರಾ ಬ್ಯಾಂಕ್ ನಲ್ಲಿ 60. ಸಾವಿರ ರೂಪಾಯಿ ಕುರಿ ಸಾಲ, ಬಂದ ಕುಂಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 1. ಲಕ್ಷ ರೂಪಾಯಿ ಬೆಳೆ ಸಾಲ, ಮನೆ ಅಡವಿಟ್ಟು ಉಜ್ಜೀವನ್ ಫೈನಾನ್ಸ್ ಕಂಪನಿಯಲ್ಲಿ 5.ಲಕ್ಷ ರೂಪಾಯಿ ಸಾಲ ಮಾಡಿದ್ದರು ಎನ್ನಲಾಗಿದೆ. ಅದಲ್ಲದೆ ಹೆಂಡತಿ ಯಶೋದಮ್ಮ ಹೆಸರಿಗೆ ಸ್ತ್ರೀ ಶಕ್ತಿ ಸಹಾಯ ಸಂಘದಲ್ಲಿ 1.10 ಲಕ್ಷ ರೂಪಾಯಿ ಸಾಲ ಪಡೆದಿದ್ದರು.

 

 

 

 

ಕಂದಾಯ ಮತ್ತು ಕೃಷಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು, ಘಟನಾ ಸ್ಥಳಕ್ಕೆ ಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಪಿಎಸ್‌ಸಿ ಹರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *