ತುಮಕೂರಿನಲ್ಲಿ ನಗರದಲ್ಲಿ ಹರಿದ ನೆತ್ತರು ಯುವಕ ಮೃತ.

ತುಮಕೂರಿನಲ್ಲಿ ನಗರದಲ್ಲಿ ಹರಿದ ನೆತ್ತರು ಯುವಕ ಮೃತ.

oplus_0

 

 

ತುಮಕೂರು -ತುಮಕೂರು ನಗರದಲ್ಲಿ ಪುಂಡರ ಅಟ್ಟಹಾಸ ಮಿತಿಹಮೀರಿದ್ದು ಇಂದು ಹಾಡು ಹಗಲೇ ಯುವಕನ ಮೇಲೆ ಪುಂಡರು ಅಟ್ಟಹಾಸ ಮೆರೆದ ಹಿನ್ನಲೆ ಯುವಕ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.

 

 

 

ನಗರದ ಮೆಳೇಕೋಟೆ ಮುಖ್ಯರಸ್ಥೆಯ ಇಸ್ರಾ ಶಾದಿ ಮಹಲ್ ಬಳಿಯ ಗುಲುಷನ್ ಬಟ್ಟೆ ಅಂಗಡಿ ಪಕ್ಕದ ಹೋಟೆಲ್ ಗ್ರೀನ್ ವೇಜಿಟೀರಿಯನ್ ಹೋಟಲ್ ಬಳಿ ಕೃತ್ಯ ನಡೆದಿದ್ದು.

 

 

 

 

 

ಮೃತ ಯುವಕನನ್ನು ಮುಬಾರಕ್ ಪಾಶ (28) ಎಂದು ತಿಳಿದು ಬಂದಿದ್ದು ಮೇಲ್ನೋಟಕ್ಕೆ ಹಣದ ವ್ಯವಹಾರವೇ ಹತ್ಯೆಗೆ ಕಾರಣ ಎನ್ನಲಾಗಿದ್ದು.

 

 

 

ಮದ್ಯಾನ ಹೋಟೆಲ್ ಬಳಿಗೆ ಬಂದಾಗ ಯುವಕ ಮುಬಾರಕ್ ಮೇಲೆ ಎರಗಿದ ಪುಂಡರು ಕುತ್ತಿಗೆ ಹಾಗೂ ಮುಖಕ್ಕೆ ಇರಿದು ಪರಾರಿಯಾಗಿದ್ದು.

 

 

ತೀವ್ರ ರಕ್ತ ಹರಿದು ಕುಸಿದು ಬಿದ್ದ  ಮುಬಾರಕ್ ನನ್ನು ಕೊಡಲೇ ಆಸ್ಪತ್ರೆಗೆ ಸಾಗಿಸಿದರು ಆ ಹೊತ್ತಿಗೆ ಯುವಕ ಮೃತಪಟ್ಟಿದ್ದು.

 

 

 

ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ ಘಟನ ಸ್ಥಳಕ್ಕೆ  ಎಸ್ಪಿ ಅಶೋಕ್, ಆಡಿಷನಲ್  ಎಸ್ಪಿ ಪುರುಷೋತ್ತಮ್, ಹಾಗೂ ಗೋಪಾಲ್ ಭೇಟಿ ನೀಡಿದ್ದು ಅಧಿಕಾರಿಗಳಿಂದ ಮಾಹಿತಿ ಪಡೆದರು ಆರೋಪಿಗಳ ಬಂದನಕ್ಕೆ ಪೊಲೀಸರು ಮುಂದಾಗಿದ್ದಾರೆ.

 

 

 

ಕೊಲೆಗಾರರ ಸುಳಿವು ಇನ್ನಷ್ಟೇ ತಿಳಿದು ಬರಬೇಕಿದೆ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಸ್ಥಳಕ್ಕೆ ತಿಲಕ್ ಪಾರ್ಕ್ ಸರ್ಕಲ್ ಇನ್ಸ್ಪೆಕ್ಟರ್ ನದಾಫ್, ಪಿಎಸ್ಐ ಪದ್ಮಾವತಿ ಭೇಟಿ ನೀಡಿದ್ದಾರೆ.

 

 

 

ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

 

 

Leave a Reply

Your email address will not be published. Required fields are marked *