ರಂಗೇರಿದ ಲೋಕಲ್ ಪೈಟ್ : ಬೆಳಗುಂಬ ಜಿ.ಪಂ ಕ್ಷೇತ್ರಕ್ಕೆ ನರಸಾಪುರ ಹರೀಶ್ ಎಂಟ್ರಿ……

ರಂಗೇರಿದ ಲೋಕಲ್ ಪೈಟ್ : ಬೆಳಗುಂಬ ಜಿ.ಪಂ ಕ್ಷೇತ್ರಕ್ಕೆ ನರಸಾಪುರ ಹರೀಶ್ ಎಂಟ್ರಿ……

 

ತುಮಕೂರು-ಜಿಲ್ಲಾ ಪಂಚಾಯ್ತಿ ಮೀಸಲಾತಿ ಪಟ್ಟಿ ಪ್ರಕಟವಾಗುತ್ತಿದ್ದಂತೆ ಲೋಕಲ್ ಅಖಾಡ ಭರ್ಜರಿ ರಂಗೇರಿದೆ,ಸಾಮಾನ್ಯ ಅಭ್ಯರ್ಥಿ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳೇ ದಂಡೇ ತುದಿಗಾಲಲ್ಲಿ ನಿಂತಿದ್ದು ಲೋಕಲ್ ಅಖಾಡ ದಿನೇ ದಿನೇ ಭರ್ಜರಿ ಕಾವೇರುತ್ತಿದೆ.

 

 

 

 

 

 

ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಬೆಳಗುಂಬ ಹಾಗೂ ಹೆಗ್ಗೆರೆ ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳು ಸಾಮಾನ್ಯ ಸ್ತಾನ ಮೀಸಲು ಪ್ರಕಟವಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಅಭ್ಯರ್ಥಿಗಳು ಭರ್ಜರಿ ಪ್ರಚಾರ ಆರಂಭಿಸಿದ್ದಾರೆ.

 

 

 

 

ಈ ಎರಡೂ ಸಾಮಾನ್ಯ ಕ್ಷೇತ್ರಗಳಲ್ಲಿ ಸ್ಪರ್ದಿಸಲು ಘಟಾನುಗಟಿಗಳು ಸಿದ್ದರಾಗಿದ್ದಾರೆ,ಮಾಜಿ ಶಾಸಕ ಡಿ ಸಿ ಗೌರೀಶಂಕರ್ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ನರಸಾಪುರ ಹರೀಶ್ ಬೆಳಗುಂಬ ಹಾಗೂ ಹೆಗ್ಗೆರೆ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಲು ಕ್ಷೇತ್ರದಾದ್ಯಂತ ಸಂಚರಿಸಿ ಮುಖಂಡರನ್ನು ಭೇಟಿ ಮಾಡುತ್ತಿದ್ದು ಸದ್ದಿಲ್ಲದೆ ಅಖಾಡಕ್ಕೆ ದುಮುಕಿದ್ದಾರೆ.

 

 

 

 

ಈ ಹಿಂದೆ ಮಾಜಿ ಶಾಸಕ ಡಿ ಸಿ ಗೌರೀಶಂಕರ್ ಜೆಡಿಎಸ್ ಪಕ್ಷದಲ್ಲಿದ್ದಾಗ ನರಸಾಪುರ ಹರೀಶ್ ಅವರಿಗೆ ಬೆಳಗುಂಬ ಜಿಲ್ಲಾ ಪಂಚಾಯ್ತಿ ಉಸ್ತುವಾರಿ ವಹಿಸಲಾಗಿತ್ತು,ಆ ಅವಧಿಯಲ್ಲಿ ಪಂಚರತ್ನ ರಥ ಯಾತ್ರೆಗೆ ಸಾವಿರಾರು ಜನ ಕಲೆಹಾಕಿ ಕಾರ್ಯಕ್ರಮ ಯಶಸ್ವಿಯಾಗಲು ಹಗಲಿರುಳು ದುಡಿದಿರುವ ಉದಾಹರಣೆಗಳೂ ಇವೆ.

 

 

 

 

 

ಮಾಜಿ ಶಾಸಕ ಗೌರೀಶಂಕರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವುದರಲ್ಲಿ ಇವರೂ ಒಬ್ಬರಾಗಿದ್ದು ಯಾವುದೇ ಕಾರಣಕ್ಕೂ ಗೌರೀಶಂಕರ್ ಅವರು ತಮ್ಮ ಆಪ್ತರನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡದಿರುವುದು ಇವರ ರಾಜಕೀಯ ಬದುಕಿಗೆ ಟರ್ನಿಂಗ್ ಪಾಯಿಂಟ್ ಆಗಲಿದೆ ಎಂಬ ಮಾತುಗಳೂ ಕ್ಷೇತ್ರದಾದ್ಯಂತ ಕೇಳಿ ಬರುತ್ತಿವೆ.

 

 

 

 

 

ನರಸಾಪುರ ಹರೀಶ್ ತುಮಕೂರಿನ ಟೂಡಾ ಅಧ್ಯಕ್ಷ ಸ್ತಾನದ ಪ್ರಭಲ ಆಕಾಂಕ್ಷಿಯಾಗಿದ್ದು ಘಟಾನುಗಟಿಗಳಿಗೇ ಟಕ್ಕರ್ ಕೊಟ್ಟಿರುವ ವಿಚಾರವೂ ಗುಟ್ಟಾಗಿ ಉಳಿದಿಲ್ಲ,ಒಂದು ವೇಳೆ ಟೂಡಾ ಅಧ್ಯಕ್ಷ ಸ್ತಾನ ಕೈತಪ್ಪಿದರೆ ಲೋಕಲ್ ಅಖಾಡಕ್ಕೆ ದುಮುಕುವುದಕ್ಕೂ ಅಖಾಡ ಸಿದ್ದಪಡಿಸಿಕೊಳ್ಳುತ್ತಿರುವ ವಿಚಾರ ಗುಟ್ಟಾಗಿ ಉಳಿದಿಲ್ಲ.

Leave a Reply

Your email address will not be published. Required fields are marked *