ನಾಡ ಬಾಂಬ್ ಸ್ಪೋಟಿಸಿಕೊಂಡು ಯುವಕ ಆತ್ಮಹತ್ಯೆ….???

ನಾಡ ಬಾಂಬ್ ಸ್ಪೋಟಿಸಿಕೊಂಡು ಯುವಕ ಆತ್ಮಹತ್ಯೆ….???

 

ತುಮಕೂರು -ನಾಡ ಬಾಂಬ್ ಸ್ಪೋಟಿಸಿಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

 

 

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿಯ ಜೋಗಿಹಳ್ಳಿ ಬಳಿ ಶನಿವಾರ ಮಧ್ಯಾನ ಘಟನೆ ನಡೆದಿದ್ದು ಘಟನೆಯಲ್ಲಿ ಬೆಂಗಳೂರಿನಿಂದ ಯುವತಿ ಒಬ್ಬಳನ್ನ ಕಾರಿನಲ್ಲಿ ಕರೆತಂದಿದ್ದ ನಾಗೇಂದ್ರ ಎಂಬ ಯುವಕ ಚಲಿಸುತ್ತಿದ್ದ ಕಾರಿನಲ್ಲಿ ನಾಡ ಬಾಂಬ್ ಸ್ಪೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

 

 

ಇನ್ನು ಘಟನೆ ನಡೆದ ವೇಳೆ ಪ್ರಯಾಣದ ಮಧ್ಯೆ ಇಬ್ಬರ ನಡುವೆ ತೀವ್ರ ಜಗಳ ನಡೆದಿದ್ದು ಆಕ್ರೋಶಗೊಂಡ ನಾಗೇಂದ್ರ ಯುವತಿಗೆ ಚಾಕುವಿನಿಂದ ಇರಿದಿದ್ದು ಈ ವೇಳೆ ಪ್ರಾಣಾಪಾಯದಿಂದ ಯುವತಿ ತಕ್ಷಣವೇ ಕಾರಿನ ಡೋರ್ ತೆಗೆದು ಹೊರಗೆ ಬಂದಿದ್ದು.

 

 

 

ಇದೇ ಸಂದರ್ಭದಲ್ಲಿ ಘಟನೆಯಲ್ಲಿ  ಗಾಯಗೊಂಡಿದ್ದ  ಯುವತಿ ರಸ್ತೆಗೆ ಬೀಳುತ್ತಿದ್ದಂತೆ  ಏಕಾಏಕಿ ಕಾರಿನೊಳಗೆ ಕೂತು ನಾಡ ಬಾಂಬ ಸ್ಪೋಟಿಸಿಕೊಂಡಿದ್ದಾನೆ ಎನ್ನಲಾಗಿದೆ.

 

 

 

ಸ್ಫೋಟದ ತೀವ್ರತೆಗೆ ಕಾರು ಸಂಪೂರ್ಣವಾಗಿ ಹೊತ್ತಿ ಉರಿದಿದ್ದು ನಾಗೇಂದ್ರ(30) ಕಾರಿನೊಳಗೆ ಸುಟ್ಟು ಕರಕಲಾಗಿದ್ದಾನೆ. ಘಟನೆಯಲ್ಲಿ ಗಾಯಗೊಂಡಿದ್ದ ಯುವತಿಯನ್ನ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎನ್ನಲಾಗಿದೆ .

 

ಸ್ಫೋಟದ ತೀವ್ರತೆಗೆ ಕಾರು ಛಿದ್ರವಾಗಿದ್ದು ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ಇಲಾಖೆ ಎಲ್ಲಾ ಆಯಾಮಗಳನ್ನು ತನಿಖೆ ಕೈಗೊಂಡಿದ್ದು.ಸ್ಥಳಕ್ಕೆ ಜಿಲ್ಲಾ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ ಕಳ್ಳಂಬೆಳ್ಳ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಘಟನೆ.

Leave a Reply

Your email address will not be published. Required fields are marked *