ಬಡಮಕ್ಕಳಿಗೆ ನೆರವಾಗಿ ಅರ್ಥಪೂರ್ಣವಾಗಿ ಜನ್ಮದಿನ ಆಚರಿಸಿಕೊಂಡ ಕಾಂಗ್ರೆಸ್ ಮುಖಂಡ ಎನ್.ಆರ್.ಹರೀಶ್…….

ತುಮಕೂರು -ತುಮಕೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಎನ್.ಆರ್. ಹರೀಶ್ ಅವರು ಗ ಸಮಾಜ ಸೇವಾ ಕಾರ್ಯಗಳ ಮೂಲಕ ತಮ್ಮ 42 ನೇ ಹುಟ್ಟುಹಬ್ಬವನ್ನು ಅರ್ಥಪೂರ್ಣಾಗಿ ಆಚರಿಸಿಕೊಂಡರು.
ಜನ್ಮದಿನದ ಅಂಗವಾಗಿ ಬೆಳಿಗ್ಗೆ ಸಿದ್ಧಗಂಗಾ ಮಠದಲ್ಲಿ ಡಾ. ಶಿವಕುಮಾರ ಸ್ವಾಮೀಜಿಗಳ ಗದ್ದಿಗೆಗೆ ಪೂಜೆ ಸಲ್ಲಿಸಿದರು. ನಂತರ ಶ್ರೀಮಠದ ಅಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಬಳಿಕ ಬೆಳ್ಳಾವಿಯ ಕಾರದೇಶ್ವರ ಮಠದಲ್ಲಿ ಕಾರದ ವೀರಬಸವ ಸ್ವಾಮೀಜಿಗಳ ದರ್ಶನ ಮಾಡಿ ಆಶೀರ್ವಾದ ಪಡೆದರು.ಶ್ರೀ ಮಠದ ವಿದ್ಯಾರ್ಥಿಗಳಿಗೆ ಎನ್.ಆರ್. ಹರೀಶ್ ಅವರು ಟ್ರಂಕ್ ಮತ್ತಿತರ ಪರಿಕರಗಳನ್ನು ವಿತರಿಸಿದರು.
ನಂತರ ನಗರದ ಸಾರ್ವಜಿನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಬ್ರೆಡ್ ಹಂಚಿದರು. ಇದಲ್ಲದೆ ಅನಾಥ, ವಿಕಲಚೇತನ ಮಕ್ಕಳಿಗೆ ವಿವಿಧ ಸಾಮಗ್ರಿ ನೀಡಿ ನೆರವಾದರು.
ಈ ವೇಳೆ ಕಾಂಗ್ರೆಸ್ ಯುವ ಮುಖಂಡ ಎನ್ ಆರ್ ಹರೀಶ್ ಮಾತನಾಡಿ ಜನ್ಮದಿನದಂದು ಗುರುಗಳ ಆಶೀರ್ವಾದ ಪಡೆದಿದ್ದೇನೆ,ಗುರುಗಳ ಆಶೀರ್ವಾದ ಇದ್ದರೆ ಗುರಿ ಸಾಧಿಸಲು ಸಾಧ್ಯ ಅದೇ ರೀತಿ ಬೆಳ್ಳಾವಿ ಕಾರದ ಮಠದ ವಿದ್ಯಾರ್ಥಿಗಳಿಗೆ ಟ್ರಂಕ್ ವಿತರಣೆ ಮಾಡಲಾಗಿದೆ ,ಸರ್ಕಾರಿ ಆಸ್ಪತ್ರೆ ಬಡ ರೋಗಿಗಳಿಗೆ ಹಣ್ಣು ವಿತರಿಸಿ ಜನ್ಮದಿನ ಆಚರಿಸಿಕೊಂಡಿರುವುದು ಖುಷಿ ನೀಡಿದೆ,ಮುಂದಿನ ದಿನಗಳಲ್ಲೂ ಕೈಲಾದಷ್ಟು ಸಮಾಜಸೇವಾ ಕಾರ್ಯ ಮಾಡುವುದಾಗಿ ಹೇಳಿದರು.
ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿ ಮಹೇಶ್, ಹಿರಿಯ ವಕೀಲ, ಕಾಂಗ್ರೆಸ್ ಮುಖಂಡ ಹಾಲನೂರು ಅನಂತಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಭೋವಿಪಾಳ್ಯ ಉಮೇಶ್, ಮುಖಂಡರಾದ ಪಾಲನೇತ್ರಯ್ಯ, ಹೆಬ್ಬೂರು ರಾಘವೇಂದ್ರ, ಕುಪ್ಪೂರು ಪಣಗಾರ್ ಶಿವಕುಮಾರ್, ವಿಷ್ಣುವರ್ಧನ್, ಹಿರೇಹಳ್ಳಿ ತನ್ವೀರ್, ಪ್ರಕಾಶ್, ಸುಭಾಶ್ ಪಟೇಲ್, ಧನಂಜಯ, ಚೇತನ್, ಎನ್.ಹೆಚ್. ಪ್ರಭಾಸ್ ಮೊದಲಾದವರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
