ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿದೆ ತುಮಕೂರಿನ ಇಂದಿರಾ ಕ್ಯಾಂಟೀನ್ ಮೆನು, ಗ್ರಾಹಕರ ಸಂಖ್ಯೆ ಹೆಚ್ಚಳ.

ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿದೆ ತುಮಕೂರಿನ ಇಂದಿರಾ ಕ್ಯಾಂಟೀನ್ ಮೆನು, ಗ್ರಾಹಕರ ಸಂಖ್ಯೆ ಹೆಚ್ಚಳ.

 

 

ತುಮಕೂರು – ಸರ್ಕಾರದ ಮಹತ್ವದ ಯೋಜನೆಯಲ್ಲಿ ಒಂದಾದ ಬಡವರು, ಕೂಲಿ ಕಾರ್ಮಿಕರು, ಶ್ರಮಿಕ ವರ್ಗ ಒಳಗೊಂಡಂತೆ ಎಲ್ಲರಿಗೂ ಕಡಿಮೆ ದರದಲ್ಲಿ ಉತ್ತಮ ಆಹಾರ ಒದಗಿಸುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಆರಂಭವಾದ ಇಂದಿರಾ ಕ್ಯಾಂಟೀನ್ ಇಂದು ಹಲವರ ಹಸಿವನ್ನ ನೀಗಿಸುತ್ತಿದೆ.

 

 

 

 

ಇದರ ಜೊತೆಯಲ್ಲೇ ತುಮಕೂರು ನಗರದಲ್ಲಿ ಹಲವು ಬಾಗದ ಪ್ರಯಾಣಿಕರು,ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರ ಹಸಿವಿಗೆ ಉತ್ತಮ ಮತ್ತುರುಚಿಯಾದ ಊಟ ಹಾಗೂ ತಿಂಡಿಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ.

 

 

 

 

ತುಮಕೂರು ನಗರದ ರೈಲ್ವೆ ಸ್ಟೇಷನ್ ರಸ್ತೆ,ಮಂಡಿಪೇಟೆ, ಎಪಿಎಂಸಿ ಮಾರ್ಕೆಟ್, ಕ್ಯಾತ್ಸಂದ್ರ ಸೇರಿದಂತೆ ತುಮಕೂರು ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ಒಟ್ಟು ಆರು ಕ್ಯಾಂಟೀನ್ ಗೆ ಈಗ ನಿರೀಕ್ಷೆಗೂ ಮೀರಿ ಹೆಚ್ಚಿನ ಗ್ರಾಹಕರು ಬರುತ್ತಿದ್ದಾರೆ.

 

 

 

 

ಕಾರಣ ವಿವಿಧ ಇಂದಿರಾ ಕ್ಯಾಂಟೀನ್ ನಲ್ಲಿ ವಿವಿಧ ಬಗೆಯ ತಿಂಡಿ ಹಾಗೂ ಊಟದ ಮೆನು ಈಗ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದು ಉತ್ತಮ ಆಹಾರವೇ ಇಂದು ಗ್ರಾಹಕರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ .

 

 

 

ಇನ್ನು ಬೆಳಗಿನ ಉಪಹಾರ ಇಡ್ಲಿ,ಪುಳಿಯೋಗರೆ ಕಾರ ಬಾತ್,ರವಾ ಕಿಚಡಿ, ಚಿತ್ರಾನ್ನ ವಾಂಗಿಬಾತ್, ಕಾರ ಬಾತ್, ಕೇಸರಿಬಾತ್ ಸೇರಿದಂತೆ ವಿವಿಧ ಬಗೆಯ ಉಪಹಾರದ ಖಾದ್ಯ ಗ್ರಾಹಕರನ್ನ ಕೈಬೀಸಿ ಕರೆಯುತ್ತಿದೆ.

 

 

 

 

ಇನ್ನು ಮಧ್ಯಾಹ್ನದ ಊಟಕ್ಕೆ ತರಕಾರಿ ಸಾಂಬಾರ್ ಅನ್ನ ಹಾಗೂ ಇದರ ಜೊತೆ ಪ್ರತಿನಿತ್ಯ ವಿವಿಧ ಬಗೆಯ ರೈಸ್ ಬಾತ್ ಹಾಗೂ ಮೊಸರನ್ನ ನೀಡುತ್ತಿದ್ದು ಕೇವಲ ಹತ್ತು ರೂಪಾಯಿಗೆ ಹೊಟ್ಟೆ ತುಂಬಾ ಶುಚಿ ಹಾಗೂ ರುಚಿಯಾದ ಊಟ ದೊರೆಯುತ್ತಿದ್ದು ಗ್ರಾಹಕರು ಈಗ ಇಂದಿರಾ ಕ್ಯಾಂಟೀನ್ ಮೊರೆ ಹೋಗಿದ್ದಾರೆ.

 

 

 

 

ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದ್ದು ಇದರ ಅನ್ವಯ ಸಾಮಾನ್ಯ ಹೋಟೆಲ್ನಲ್ಲಿ ದುಬಾರಿಯಾದ ಊಟ, ತಿಂಡಿ ಕಾರಣವಾಗಿದ್ದು ಈ ಹಿನ್ನೆಲೆಯಲ್ಲಿ ಗ್ರಾಹಕರು ಇಂದಿರ ಕ್ಯಾಂಟೀನ್ನತ್ತ ಮುಖ ಮಾಡಿದ್ದಾರೆ.

 

 

 

ಇನ್ನು ತುಮಕೂರು ನಗರದಲ್ಲಿರುವ ವಿವಿಧ ಇಂದಿರಾ ಕ್ಯಾಂಟೀನ್ ನಲ್ಲಿ ಈ ಹಿಂದೆ ಇದ್ದ ಬೆರಳೆಣಿಕೆ ಗ್ರಾಹಕರನ್ನ ಬದಿಗೊತ್ತಿ ಪ್ರತಿನಿತ್ಯ ಸುಮಾರು 2000 ಕ್ಕೂ ಹೆಚ್ಚು ಗ್ರಾಹಕರು ಪ್ರತಿನಿತ್ಯ ಇಂದಿರಾ ಕ್ಯಾಂಟೀನ್ ನಿಂದ ಹಸಿವನ್ನ ನೀಗಿಸುತ್ತಿದ್ದಾರೆ.

 

 

 

 

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಹಲವು ಗ್ರಾಹಕರು ಉತ್ತಮ ಆಹಾರ ನೀಡುತ್ತಿರುವುದು ಸಂತಸ ಉಂಟು ಮಾಡಿದೆ ಎಂದಿದ್ದಾರೆ.

 

 

 

ಅದೇನೆ ಇರಲಿ ದುಬಾರಿ ಹಣ ತೇತ್ತು ಹೋಟೆಲ್ ಗೆ ಹೋಗುತ್ತಿದ್ದ ಗ್ರಾಹಕರು ಈಗ ಇಂದಿರಾ ಕ್ಯಾಂಟೀನ್ ನತ್ತ ಮುಖ ಮಾಡಿರುವುದು ಸ್ಥಳೀಯ ಆಡಳಿತಕ್ಕೂ ಕೊಂಚ ಸಂತಸ ಉಂಟು ಮಾಡಿದೆ ಎಂದರೆ ತಪ್ಪಾಗಲಾರದು.

Leave a Reply

Your email address will not be published. Required fields are marked *