ತುಮಕೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕರ ಮೇಲೆ ಹಲ್ಲೆ ಮಾಡಿದ ಆಟೋ ಚಾಲಕರು.
ತುಮಕೂರು- ಕೂಲಿ ಅರಸಿ ತುಮಕೂರಿಗೆ ಬಂದ ಬಡ ಕೂಲಿ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ಆಟೋ ಚಾಲಕರು.
ಕೂಲಿಗಾಗಿ ತುಮಕೂರಿಗೆ ಬಂದ ಕುಟುಂಬ ಒಂದು ಆಟೋ ಹತ್ತಿ ಮತ್ತೊಂದು ಸ್ಥಳಕ್ಕೆ ತೆರಳಲು ಮುಂದಾದ ವೇಳೆ ಕಾಲು ಇಟ್ಟುಕೊಳ್ಳುವ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಆಟೋ ಚಾಲಕನೊಬ್ಬ ಆಟೋಗೆ ಹತ್ತಿದ್ದ ಕುಟುಂಬವನ್ನು ಕೆಳಗಿಳಿಸಿ ದಮಕಿ ಹಾಕಿದ ಆಟೋ ಚಾಲಕನ ವರ್ತನೆಯನ್ನು ಕಂಡ ಕುಟುಂಬ ಆಟೋ ಇಳಿದು ಮತ್ತೊಂದು ಆಟೋ ಹಿಡಿದು ಪ್ರಯಾಣ ಮುಂದುವರಿಸಲು ಮುಂದಾದಾಗ ಕುಪಿತಗೊಂಡಿದ್ದ ಆಟೋ ಚಾಲಕನೊಬ್ಬ.
ಸ್ಥಳದಲ್ಲಿದ್ದ ಆಟೋ ಚಾಲಕರನ್ನು ಒಟ್ಟುಗೂಡಿಕೊಂಡು ಮತ್ತ್ತೊಂದು ಆಟೋ ಹತ್ತಿ, ಹೋಗಲು ಮುಂದಾದ ಕುಟುಂಬವನ್ನು ತಡೆದ ಕೆಲ ಆಟೋ ಚಾಲಕರು ಪ್ರಯಾಣಿಕನ ಮೇಲೆ ಆಟೋ ಚಾಲಕರು ಕುಟುಂಬ ಸದಸ್ಯರ ಮುಂದೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ವರದಿಯಾಗಿದೆ.

ತುಮಕೂರು ನಗರದ ರೇಣುಕಾ ವಿದ್ಯಾ ಪೀಠದ ಮುಂದೆ ಡಿಸೇಂಬರ್ 28 ರಂದು ನಡೆದ ಕ್ಷುಲ್ಲಕ ಗಲಾಟೆಯ ವಿಡಿಯೋ ಲಭ್ಯವಾಗಿದೆ.
ತುಮಕೂರು ನಗರದಲ್ಲಿ ಅದೆಷ್ಟೋ ಆಟೋಗಳು ಯಾವುದೇ ಪರ್ಮಿಟ್ ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ಹೊಂದದೆ ಬಾಡಿಗೆ ನಡೆಸುತ್ತಿದ್ದು ಒಂದೆಡೆಯಾದರೆ ಮತ್ತೊಂದೆಡೆ ಇಂತಹ ಪುಂಡ ಆಟೋ ಡ್ರೈವರ್ ಗಳು ಪ್ರಯಾಣಿಕರ ಮೇಲೆಯೇ ಹಲ್ಲೆ ಮಾಡುವುದು ಎಷ್ಟು ಸರಿ ಎನ್ನುವಂತಾಗಿದೆ.
ಘಟನೆಯ ನಂತರ ಆ ಬಡ ಕುಟುಂಬ ಚಾಲಕರ ವರ್ತನೆಗೆ ಹೆದರಿ ಸ್ಥಳದಿಂದ ನಡೆದುಕೊಂಡೆ ಸ್ಥಳದಿಂದ ತೆರಳಿದರು.
ಕೂಡಲೇ ಹಲ್ಲೆ ಮಾಡಿದ ಆಟೋ ಚಾಲಕರ ಮೇಲೆ ಕ್ರಮ ಕೈಗೊಂಡು ಆಟೋ ಪರ್ಮಿಟ್ ಹಾಗೂ ಚಾಲಕರ ಡಿ ಎಲ್ ಗಳನ್ನ ವಜಾ ಮಾಡಿದಾಗ ಮಾತ್ರ ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತುಮಕೂರು ನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ.
