ತುಮಕೂರಿನ ಚಿನ್ನದ ಅಂಗಡಿಗೆ ಕನ್ನ ಹಾಕಿದ್ರಾ ಅಂಗಡಿ ಕೆಲಸಗಾರರು ಎಫ್ಐಆರ್ 300 ಗ್ರಾಂ ರಿಕವರಿ ಆದದ್ದು ಎಷ್ಟು 300ಗ್ರಾಂ ಟು 8ಕೆಜಿ…????……
part-1.

ತುಮಕೂರು -ದಿನೇ ದಿನೇ ಗಗನಕ್ಕೇರುತ್ತಿರುವ ಚಿನ್ನದ ಬೆಲೆಯಿಂದ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಚಿನ್ನದ ಖರೀದಿ ನಿಲುಕದ ಗಗನ ಕುಸುಮವಾಗಿದೆ,ಬರೋ ಅಲ್ಪ ಸ್ವಲ್ಪ ಆಧಾಯವನ್ನು ಜಿನುಗಿಸಿ ಅದರಲ್ಲೇ ಚೂರು ಪಾರು ಚಿನ್ನ ಖರೀದಿಸುವ ಬಡ ಮತ್ತು ಮದ್ಯಮ ವರ್ಗದ ಜನರು ಚಿನ್ನವನ್ನು ಶೋಕಿಗಾಗಿ ಬಳಸುವುದಕ್ಕಿಂತ ಆಪತ್ಕಾಲದಲ್ಲಿ ಕಷ್ಟ ನೀಗಿಸಿಕೊಳ್ಳಲು ಬಳಸಿ ಸಂತೃಪ್ತತೆ ಹೊಂದುವವರ ಸಂಖ್ಯೆಯೇ ಹೆಚ್ಚಿದೆ.
ಚಿನ್ನದ ರೇಟು ಗಗನಕ್ಕೇರಿರುವಾಗ ತುಮಕೂರಿನ ಚಿನ್ನದ ಅಂಗಡಿಯೊಂದರ ರೋಚಕ ಕಹಾನಿ ಬಯಲಿಗೆ ಬಂದಿದೆ, ಅಂಗಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರೇ ಚಿನ್ನದ ಅಂಗಡಿ ಮಾಲೀಕನಿಗೆ ಮಕ್ಮಲ್ ಟೋಪಿ ಹಾಕಿದ್ದು ಈ ವಿಚಾರ ತುಮಕೂರು ನಗರದಾದ್ಯಂತ ಬಿಸಿ ಬಿಸಿ ಚರ್ಚೆಯ ವಿಷಯವಾಗಿದೆ. ಕಳೆದ ಹಲವಾರು ವರ್ಷಗಳಿಂದ ತುಮಕೂರಿನ ಪ್ರತಿಷ್ಠಿತ ರಸ್ತೆಗಳಲ್ಲಿ ಒಂದಾದ ಶಿರಾಣಿ ರಸ್ತೆ (ವಿವೇಕಾನಂದ ರಸ್ತೆ) ಯಲ್ಲಿ ಪ್ರತಿಷ್ಟಿತ ಶ್ರೀರಾಮನ ಜನ್ಮಸ್ತಳವನ್ನೇ ನಾಮಧೇಯವಾಗಿ ಹೊಂದಿರುವ ಚಿನ್ನದ ಅಂಗಡಿ ಕಾರ್ಯನಿರ್ವಹಿಸುತ್ತಿದ್ದು,ತನ್ನದೇ ಆದ ಬೃಹತ್ ಗ್ರಾಹಕರ ಜಾಲವನ್ನೂ ಹೊಂದಿದೆ,ಗುಣಮಟ್ಟವನ್ನೂ ಕಾಪಾಡಿಕೊಂಡು ಬಂದಿದೆ ಇದೇ ಅಂಗಡಿಯಲ್ಲಿ ನಡೆದಿರುವ ಚಿನ್ನದ ಕಳ್ಳತನ ಕೃತ್ಯ ತುಮಕೂರು ನಗರದಾದ್ಯಂತ ಸದ್ದು ಮಾಡುತ್ತಿದೆ.
ಚಿನ್ನದ ಅಂಗಡಿಯಲ್ಲಿ ಚಿನ್ನವನ್ನು ಕಳ್ಳರು ದೋಚುವುದು ಹಳೇ ಟ್ರೆಂಡ್ ಅದೇ ಅಂಗಡಿ ಕೆಲಸಗಾರರೇ ಮಾಲೀಕರಿಗೆ ಯಾಮಾರಿಸಿ ಚಿನ್ನ ದೋಚಿ ಈಗ ಭರ್ಜರಿ ಸುದ್ದಿಯಲ್ಲಿದ್ದಾರೆ.
ಪ್ರತಿಷ್ಟಿತ ಜೂವೆಲ್ಲರಿ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 13 ಮಂದಿ ಕೆಲಸಗಾರರ ಮೇಲೆ ಎಪ್ ಐ ಆರ್ ದಾಖಲಾಗಿದೆ, ಚಿನ್ನದ ಅಂಗಡಿಯಲ್ಲಿ ಹಲವು ವರ್ಷಗಳಿಂದ ಕೆಲಸಕ್ಕಿದ್ದ ಕೆಲಸಗಾರರೇ ಮಾಲೀಕರಿಗೆ ಚಳ್ಳೆ ಹಣ್ಣು ತಿನ್ನಿಸಿ ಐಷಾರಾಮಿ ಜೀವನಕ್ಕೆ ಮಾರು ಹೋಗಿದ್ದರು,ಕೆಲಸಗಾರರ ಐಶಾರಾಮಿ ಜೀವನ ಗಮನಿಸಿದ ಮಾಲೀಕ ಅನುಮಾನ ಬಂದು ತಪಾಸಣೆಗಿಳಿದಾಗ ಪ್ರಕರಣ ಹೊರ ಬಿದ್ದಿದೆ.
ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ ತಿಂಗಳಿನಲ್ಲಿ ತುಮಕೂರಿನ ನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ, ಎಫ್ ಐ ಆರ್ ನಲ್ಲಿ ಅಂಗಡಿ ಕೆಲಸಗಾರರು ಕೇವಲ 300 ಗ್ರಾಂ ಚಿನ್ನ ಕದ್ದಿದ್ದಾರೆ ಎಂದು ಚಿನ್ನದ ಅಂಗಡಿ ಮಾಲೀಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ,ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ತಮ್ಮದೇ ದಾಟಿಯಲ್ಲಿ ವಿಚಾರಣೆ ಮುಂದುವರೆಸಿದ್ದು ಅಂಗಡಿಯಲ್ಲಿ ಕೆಲಸ ಮಾಡುವ ಮಹಿಳಾ ಹಾಗೂ ಪುರುಷ ಕೆಲಸಗಾರರನ್ನೆಲ್ಲಾ ಪ್ರತ್ಯೇಕ ವಿಚಾರಣೆ ನಡೆಸಿ ಅಗಾದ ಮಾಹಿತಿ ಕಲೆಹಾಕಿ ಕದ್ದಿರುವ ಚಿನ್ನ ರಿಕವರಿ ಮಾಡಿದ್ದಾರೆ,ಆದರೆ ರಿಕವರಿ ಮಾಡಿರುವ ಚಿನ್ನದ ಪ್ರಮಾಣ ಮಾತ್ರ ಕೋಟ್ಯಾಂತರ ಬೆಲೆಯುಳ್ಳದ್ದು ಎಂಬ ಮಾಹಿತಿ ತುಮಕೂರು ನಗರದ ಗಲ್ಲಿ ಗಲ್ಲಿಗಳಲ್ಲಿ ಹರಿದಾಡುತ್ತಿರುವ ವಿಚಾರ ಗುಟ್ಟಾಗಿ ಉಳಿದಿಲ್ಲ.
ಅನುಮಾನ ಹುಟ್ಟಿಸುತ್ತಿದೆ ಚಿನ್ನದ ಅಂಗಡಿ ಮಾಲೀಕನ ನಡೆ…..
ಚಿನ್ನ ಕಳ್ಳತನ ಪ್ರಕರಣದಲ್ಲಿ ರಿಕವರಿ ಆದ ಚಿನ್ನ ಎಷ್ಟು ಎಂಬ ಬಗ್ಗೆ ಅಸಲೀ ಮಾಹಿತಿಯೇ ಹೊರಬೀಳುತ್ತಿಲ್ಲ, ಅಂಗಡಿ ಕೆಲಸಗಾರರನ್ನು ಪೊಲೀಸರು ವಿಚಾರಣೆ ಮಾಡಿದರಾ????? ವಿಚಾರಣೆ ಮಾಡಿದರೂ ಅವರ ಮೇಲೆ ಪ್ರಕರಣ ಏಕೆ ದಾಖಲಿಸಿಲ್ಲ ಎಂಬ ಪ್ರಶ್ನೆಗಳೂ ಸಾರ್ವಜನಿಕ ವಲಯದಲ್ಲಿ ಉದ್ಬವವಾಗಿದೆ.
ಚಿನ್ನದ ಅಂಗಡಿ ಮಾಲೀಕ ಕೆಲಸಗಾರರಿಂದ ಬಾಯಿ ಬಿಡಿಸಲು ಪೊಲೀಸರಿಗೆ ನಾಮಕಾವಸ್ತೆಗೆ ದೂರು ನೀಡಿದ್ದರೂ ಸಹ ದೂರಿನ ವಿಚಾರಣೆ ನಡೆಸಿದ ಪೊಲೀಸರು ಅವರಿಂದ ರಿಕವರಿ ಮಾಡಿದ ಬಂಗಾರ ,ಹಣದ ಮೌಲ್ಯದ ಬಗ್ಗೆ ಗುಟ್ಟು ಬಿಡದಿರುವುದರ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಚಿನ್ನದ ಅಂಗಡಿ ಮಾಲೀಕನ ನಡುವೆ ನಡೆದಿರಬಹುದಾದ ಒಳ ಒಪ್ಪಂದಗಳ ಬಗ್ಗೆ ತುಮಕೂರಿನ ಇತರೆ ಚಿನ್ನದ ಅಂಗಡಿ ಮಾಲೀಕರಲ್ಲಿ ಸಾಕಷ್ಟು ತರಹೇವಾರಿ ಚರ್ಚೆಗಳೂ ನಡೆಯುತ್ತಿದ್ದ ಸಾಕಷ್ಟು ಅನುಮಾನ ಹುಟ್ಟು ಹಾಕಿವೆ.
ಪ್ರತಿಷ್ಠೆಗೆ ಬಿದ್ದಿರುವ ಅಂಗಡಿ ಮಾಲೀಕ ರಿಕವರಿ ಆಗಿರುವ ಹಣ ಮತ್ತು ಚಿನ್ನದ ಮೌಲ್ಯ ಎಷ್ಟು ಎಂಬುದನ್ನು ಗುಟ್ಟಾಗಿ ಇಟ್ಟಿರುವುದು ಯಾಕೆ ಎಂಬ ಅನುಮಾನ ಸಹಜವಾಗಿಯೇ ಮೂಡುತ್ತದೆ, ಇನ್ನು ಪ್ರಕರಣ ದಾಖಲಾಗಿ 25 ದಿನ ಕಳೆದರು ಚಿನ್ನದ ಅಂಗಡಿಯಲ್ಲಿ ನಾಪತ್ತೆ ಆಗಿರುವ ಸುದ್ದಿಯು ಯಾವುದೇ ಪತ್ರಿಕೆ ,ಸ್ಥಳೀಯ ಚಾನಲ್, ಮಾಧ್ಯಮದಲ್ಲಿ ಪ್ರಕರಣದ ಸುದ್ದಿ ವರದಿಯಾಗದ ಹಿನ್ನೆಲೆಯಲ್ಲಿ ನಗರದ ವಿವಿಧ ಚಿನ್ನ ಬೆಳ್ಳಿ ಅಂಗಡಿಯ ಮಾಲೀಕರು,ವರ್ತಕರು, ಚಿನ್ನ ಗಿರವಿದಾರರು ಪತ್ರಕರ್ತರೂ ಸಹ ಪ್ರಕರಣದ ಸುದ್ದಿ ಹೊರತರದೆ ಸೈಲೆಂಟ್ ಆಗಿರುವ ಬಗ್ಗೆ ಥರಹೇವಾರಿ ಚರ್ಚೆಯಲ್ಲಿ ತೊಡಗಿದ್ದಾರೆ ಮುಂದಿನ ಭಾಗದಲ್ಲಿ ತನಿಖೆಯ ಹಾದಿ ಯಾವ ನಿಟ್ಟಿನಲ್ಲಿ ಸಾಗಿತು ಯಾರ ಯಾರ ಮನೆಯಿಂದ ಎಷ್ಟು ಹಣ ಚಿನ್ನ ರಿಕವರಿ ಮಾಡಲಾಯಿತು ಯಾರ್ಯಾರು ತನಿಖೆಯ ನೇತೃತ್ವ ವಹಿಸಿದ್ದರು ಕಳವಾದ ಹಾಗೂ ಪತ್ತೆಯಾದ ಚಿನ್ನ ಹಾಗೂ ಹಣದ ಮೌಲ್ಯ ಎಷ್ಟು ಎಂಬುದನ್ನ ಮುಂದಿನ ಭಾಗದಲ್ಲಿ ತಮ್ಮ ಮುಂದೆ ಇಡುವ ಒಂದು ಸಣ್ಣ ಪ್ರಯತ್ನವನ್ನ ಮುಂದಿನ ಭಾಗದಲ್ಲಿ ತರಲಾಗುವುದು.
ಮುಂದುವರೆಯುವುದು………
