ನಿಂತ ಸ್ಥಿತಿಯಲ್ಲೇ ಅನುಮಾನಾಸ್ಪದವಾಗಿ ಮೃತ ಪಟ್ಟ ಯುವಕ, ಸಾವಿನ ಹಿಂದಿದೆಯ ಪ್ರೇಯಸಿಯ ಕರಿ ನೆರಳು….?

ನಿಂತ ಸ್ಥಿತಿಯಲ್ಲೇ ಅನುಮಾನಾಸ್ಪದವಾಗಿ ಮೃತ ಪಟ್ಟ ಯುವಕ, ಸಾವಿನ ಹಿಂದಿದೆಯ ಪ್ರೇಯಸಿಯ ಕರಿ ನೆರಳು….?

 

 

 

ತಿಪಟೂರು_ ಪ್ರೇಯಸಿಯ ಮನೆ ಹಿತ್ತಲಿನಲ್ಲಿ ಪ್ರಿಯತಮ ನಿಂತ ಸ್ಥಿತಿಯಲ್ಲೇ ಅನುಮಾನಾಸ್ಪದವಾಗಿ ಪ್ರಾಣ ಬಿಟ್ಟಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಗುರುಗದಹಳ್ಳಿಯಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ .

 

 

 

 

ಬೆಂಗಳೂರಿನ ನಾಗಸಂದ್ರದಲ್ಲಿ ತರಕಾರಿ ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಯುವಕ ಕುಟುಂಬಕ್ಕೆ ಆಧಾರವಾಗಿದ್ದ. ಚಿಕ್ಕ ವಯಸ್ಸಿನಲ್ಲೇ ಕುಟುಂಬದ ಜವಾಬ್ದಾರಿ ಹೊತ್ತಿದ್ದ ಯುವಕ ಹರ್ಷ ಚಿಕ್ಕ ವಯಸ್ಸಿನಲ್ಲಿ ಅರಸಿಕೆರೆ ತಾಲೂಕಿನ ಮೇಲಿನಹಳ್ಳಿಯ ಮಾವನ ಮನೆಯಲ್ಲಿ ಬೆಳೆದಿದ್ದ ಹರ್ಷ ಸುತ್ತ ಮುತ್ತಲ ಗ್ರಾಮಗಳ ಹಲವರೊಂದಿಗೆ ಬಹಳಷ್ಟು ಒಡನಾಟವನ್ನ ಹೊಂದಿದ್ದು .

 

 

 

ಆರು ವರ್ಷಗಳ ಹಿಂದೆ ತಿಪಟೂರು ತಾಲೂಕಿನ ಗುರುಗದಹಳ್ಳಿಯ ದೇವರ ಕಾರ್ಯಕೆಂದು ಹೋದಾಗ ಅದೇ ಊರಿನ ಯುವತಿಯ ಪರಿಚಯವಾಗಿದ್ದು ಪರಿಚಯ ಪ್ರೀತಿಗೆ ತಿರುಗಿ ಇಬ್ಬರೂ ಪರಸ್ಪರ ಪ್ರೀತಿಸಿಸುತ್ತಿದ್ದರು ಎಂದು ತಿಳಿದುಬಂದಿದೆ.

 

 

 

ಜುಲೈ 18ರಂದು ಊರಿಗೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದ ಹರ್ಷ ಜುಲೈ 20ರ ಭಾನುವಾರದಂದು ಯುವತಿಯ ಮನೆಯ ಹಿತ್ತಲಿನಲ್ಲಿ ಶವವಾಗಿ ಕಂಡುಬಂದ ಹಿನ್ನೆಲೆಯಲ್ಲಿ ಮಲ್ಲೇನಹಳ್ಳಿಯ ಹರೀಶ್ ಎನ್ನುವವರು ಮೃತಪಟ್ಟ ಯುವಕನ ಸಹೋದರ ರಾಕೇಶನಿಗೆ ಕರೆ ಮಾಡಿ ತಮ್ಮ ಅಣ್ಣ ಹರ್ಷ ಗುರುಗದ ಹಳ್ಳಿಯ ರಮೇಶ್ ಎಂಬುವರ ಮನೆಯ ಹಿತ್ತಲಿನಲ್ಲಿ ಮೃತಪಟ್ಟಿರುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ.

 

 

 

 

ಬೆಂಗಳೂರಿನಿಂದ ಗುರುಗದ ಹಳ್ಳಿಯ ಗ್ರಾಮಕ್ಕೆ ಧಾವಿಸಿ ಬಂದ ಮೃತ ಹರ್ಷನ ಕುಟುಂಬದವರು ನಿಂತ ಸ್ಥಿತಿಯಲ್ಲೇ ಹರ್ಷ ಪ್ರಾಣ ಬಿಟ್ಟಿರುವ ಘಟನೆಯ ನೋಡಿ ಆಘಾತಕ್ಕೀಡಾಗಿದ್ದರು. ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಹರ್ಷನ ಶವವನ್ನು ಕಂಡ ತಮ್ಮ ರಾಕೇಶ್ ತನ್ನ ಅಣ್ಣನ ಸಾವು ಅಸಹಜ ಸವೆಂದು ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು.

 

 

 

ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ಮಾಡಿ ಶವವನ್ನು ಹಾಸನದ ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿ ಪೋಸ್ಟ್ ಮಾರ್ಟಂ ನಂತರ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದು ಒಂದೆಡೆಯಾದರೆ .

 

 

 

ಮತ್ತೊಂದೆಡೆ ತಾನು ಪ್ರೀತಿಸುತ್ತಿದ್ದ ಯುವತಿಯ ಮನೆಯ ಹಿತ್ತಲಿನ ತೇಗದ ಮರಕ್ಕೆ ಅಂಟಿಕೊಂಡಂತೆ ಹರ್ಷನ ಶವ ಅನುಮಾನಾಸ್ಪದ ಸಾವಿಗೆ ಪುಷ್ಠಿ ನೀಡುತ್ತಿದ್ದು ಹರ್ಷನ ಜೇಬಿನಲ್ಲಿ ವಿಷದ ಬಾಟಲಿಯೂ ಸಹ ಕಂಡುಬಂದಿದ್ದು ಸಾಕಷ್ಟು ಅನುಮಾನ ಹುಟ್ಟು ಹಾಕಿದೆ. ಕುಟುಂಬಕ್ಕೆ ಆಧಾರವಾಗಿದ್ದ ಹರ್ಷ ಒಂದೆಡೆ ಮೃತಪಟ್ಟರೆ ಮತ್ತೊಂದೆಡೆ ಹರ್ಷನ ತಾಯಿಯು ಸಹ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ತಂದೆ ಕೂಡ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ.

 

 

 

 

 

ಕುಟುಂಬದ ಜವಾಬ್ದಾರಿಯ ನೇಗಿಲು ಹೊತ್ತಿದ್ದ ಹರ್ಷ ಸಾವಿನಿಂದ ಹಿಡಿ ಕುಟುಂಬ ಕಂಗಾಲಾಗಿದ್ದು ತನ್ನ ಅಣ್ಣನ ಸಾವು ಅನುಮಾನವಾಗಿದ್ದು ಪೊಲೀಸರು ಈವರೆಗೂ ಹುಡುಗಿಯ ಮನೆಯವರನ್ನ ಕರೆಸಿ ತನಿಖೆ ನಡೆಸುತ್ತಿಲ್ಲ ಎಂಬ ಆರೋಪ ಸಹ ಕೇಳಿ ಬಂದಿದ್ದು ಪೊಲೀಸರ ನಡೆಯು ಸಹ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿದ್ದು ಇನ್ನಾದರೂ ಇಲಾಖೆಯ ಹಿರಿಯ ಅಧಿಕಾರಿಗಳು ಯುವಕನ ಅನುಮಾನಾಸ್ಪದ ಸಾವಿನ ಹಿಂದಿನ ಸತ್ಯವನ್ನ ಶೋಧಿಸಿ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುವರೆ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *