ತುಮಕೂರಿನಲ್ಲಿ ಉತ್ತರ ಪ್ರದೇಶ ಮೂಲದ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ…..???.

ತುಮಕೂರು : ತುಮಕೂರಿನಲ್ಲಿ ಉತ್ತರ ಪ್ರದೇಶ ಮೂಲದ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಹಲ್ಲೇ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದವರನ್ನು ಬಂಧಿಸಿರುವ ಕ್ಯಾತ್ಸಂದ್ರ ಪೊಲೀಸರು, ಸಂತ್ರಸ್ತ ಬಾಲಕಿಯನ್ನು ಮಕ್ಕಳ ರಕ್ಷಣಾ ಘಟಕಕ್ಕೆ ಕಳುಹಿಸಿದ್ದು, ಪ್ರಕರಣವನ್ನು ಗಂಭಿರವಾಗಿ ತನಿಖೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ತುಮಕೂರು ನಗರದ ಕ್ಯಾತ್ಸಂದ್ರದ ಬಳಿ ಇರುವ ಟೋಲ್ ಪ್ಲಾಜ ಸಮೀಪದಲ್ಲಿ ಕಾಂಕ್ರಿಟ್ ಗೋಡೆಗಳನ್ನು ನಿರ್ಮಾಣ ಮಾಡುವ ಕಾಂಕ್ರಿಟ್ ಸ್ಲಾಬ್ ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡಲು ಉತ್ತರ ಭಾರತ ಮೂಲದ (ಉತ್ತರ ಪ್ರದೇಶ ರಾಜ್ಯ) ಮೂವರು ಯುವಕರು ಅಪ್ರಾಪ್ತ ಹಿಂದು ಬಾಲಕಿಯನ್ನು ಉತ್ತರ ಪ್ರದೇಶದಿಂದ ಮದುವೆಯಾಗುವುದಾಗಿ ನಂಬಿಸಿ ಕರೆ ತಂದಿರುವುದಲ್ಲದೇ ಆಕೆಯನ್ನು ಕಳೆದ ಮೂರು ದಿನಗಳಿಂದ ನಿರಂತರವಾಗಿ ಹಲ್ಲೇ ಮಾಡುತ್ತಿದ್ದರು ಎನ್ನಲಾಗಿದೆ.

ಹಲ್ಲೇ ಮಾಡುತ್ತಿದ್ದಂತಹ ಸಂದರ್ಭದಲ್ಲಿ ಬಾಲಕಿಯ ಕಿರುಚಾಟ ಕೇಳಿ ಅಲ್ಲೇ ಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ಕೆಲ ಉತ್ತರ ಭಾರತದ ಮೂಲದವರು ಆಕೆಯನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿಸಿದ್ದಾರೆ. ಜೊತೆಗೆ ಅವರ ಹೇಳಿಕೆಯಂತೆ ಆಕೆಯನ್ನು ಕಳೆದ ಒಂದು ತಿಂಗಳ ಹಿಂದೆಯೇ ಕರೆತಂದಿದ್ದು, ಅಕ್ರಮ ಬಂಧನದಲ್ಲಿರಿಸಿ ಆಕೆಯನ್ನು ಮುಸ್ಲಿಂ ಮತಾಂತರ ಮಾಡಲು (ಲವ್ ಜಿಹಾದ್) ನಡೆಸಲು ಯತ್ನಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದ್ದು, ನೈಜ ತನಿಖೆಯಿಂದಷ್ಟೇ ಪ್ರಕರಣ ಸತ್ಯಾಸತ್ಯತೆ ಹೊರ ಬರಬೀಳಲಿದೆ.

Accused person Akram.
ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಅಕ್ರಂ ಸೇರಿದಂತೆ ಆತನೊಂದಿಗೆ ಇದ್ದ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆಂದು ಹೇಳಲಾಗಿದೆ.
ಸ್ಥಳದಲ್ಲಿದ್ದ ಸಂತಸ್ಥ ಬಾಲಕಿಯನ್ನು ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ ಸಧ್ಯ ಸಂತ್ರಸ್ತ ಬಾಲಕಿ ಮಕ್ಕಳ ರಕ್ಷಣಾ ಘಟಕಕ್ಕೆ ರವಾನಿಸಲಾಗಿದೆ. ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
