ತುಮಕೂರು ಲೋಕಾಯುಕ್ತ ಕಚೇರಿಯಲ್ಲಿ ಮಿತಿಮೀರಿದ ಭ್ರಷ್ಟಾಚಾರ: ಉಪಲೋಕಾಯುಕ್ತರಿಗೆ ದೂರು…..

ತುಮಕೂರು ಲೋಕಾಯುಕ್ತ ಕಚೇರಿಯಲ್ಲಿ ಮಿತಿಮೀರಿದ ಭ್ರಷ್ಟಾಚಾರ: ಉಪಲೋಕಾಯುಕ್ತರಿಗೆ ದೂರು…..

 

 

ತುಮಕೂರು-ತುಮಕೂರು ಲೋಕಾಯುಕ್ತ ಕಚೇರಿಯಲ್ಲಿ ಲೋಕಾಯುಕ್ತ ಎಸ್ಪಿ ಹಾಗೂ ಲೋಕಾಯುಕ್ತ ಪೊಲೀಸ್ ನಿರೀಕ್ಷಕರು ಲೋಕಾಯುಕ್ತ ದಾಳಿ ನೆಪದಲ್ಲಿ ವ್ಯಾಪಕ ಭ್ರಷ್ಟಾಚಾರ ಹಾಗೂ ಅಕ್ರಮ ನಡೆಸುತ್ತಿರುವ ಆರೋಪ ಕೇಳಿ ಬಂದಿದೆ.

 

 

 

 

 

 

ಲೋಕಾಯುಕ್ತ ದಾಳಿ ಸೋಗಿನಲ್ಲಿ ಅಧಿಕಾರಿಗಳಿಂದ ಲಕ್ಷಾಂತರ ರೂ ವ್ಯವಹಾರ ಕುದುರಿಸುತ್ತಿರುವ ಲೋಕಾಯುಕ್ತ ಅಧಿಕಾರಿಗಳ ವಿರುದ್ದ ಸಮಗ್ರ ತನಿಖೆ ನಡೆಸಿ ಸೇವೆಯಿಂದ ವಜಾಮಾಡುವಂತೆ ಆಗ್ರಹಿಸಿ ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ ರಾಜ್ಯಾಧ್ಯಕ್ಷ ಹೆಚ್ ಜಿ ರಮೇಶ್ ಉಪಲೋಕಾಯುಕ್ತರಿಗೆ ದೂರು ನೀಡಿದ್ದಾರೆ.

 

 

 

 

ಕುಣಿಗಲ್‌ ಸರ್ಕಾರಿ ಆಸ್ಪತ್ರೆಗೆ ಮತ್ತು ತಾಲ್ಲೂಕು ಸರ್ವೆ ಕಚೇರಿಗೆ ಭೇಟಿ ನೀಡಿ ಅಲ್ಲಿ ಕೆಲ ದಾಖಲೆಗಳನ್ನು ವಶಪಡಿಸಿಕೊಂಡು ಹಲವಾರು ತಿಂಗಳುಗಳು ಕಳೆದರೂ ಸಹ ವಿಚಾರಣೆ ಮತ್ತು ವರದಿಯನ್ನು ಪೂರ್ಣಗೊಳಿಸದೆ ಯಾವುದೇ ಕ್ರಮವನ್ನು ಜರುಗಿಸದೇ ಇರುವುದು, ತುಮಕೂರು ಮತ್ತು ಮಧುಗಿರಿಯಲ್ಲಿನ ಆರ್ ಟಿ ಓ ಕಚೇರಿಗಳ ಮೇಲೆ ದಾಳಿ ಮಾಡಿರುವ ತುಮಕೂರು ಲೋಕಾಯುಕ್ತ ಅಧಿಕಾರಿಗಳು ಸಾವಿರಾರು ಟ್ಯಾಕ್ಟರ್ ಗಳ ನಕಲಿ ಬೋನೊಫೈಡ್ ಸರ್ಟಿಫಿಕೇಟ್ ಕಂಡುಬಂದಿದ್ದು ಕೋಟ್ಯಂತರ ರೂಪಾಯಿ ಸರ್ಕಾರಕ್ಕೆ ನಷ್ಟವಾಗಿದೆ ವರದಿಯಾಗಿರುತ್ತದೆ ಈ ಬಗ್ಗೆ ದಾಳಿಯಾಗಿ ಸುಮಾರು 10 ತಿಂಗಳುಗಳು ಕಳೆದರೂ ಈವರೆಗೂ ಯಾರ ಮೇಲೂ ಕ್ರಮಕ್ಕೆ ಮುಂದಾಗದಿರುವುದು

 

 

 

 

 

 

ತುಮಕೂರು ಜಿಲ್ಲೆ ತುರುವೇಕೆರೆ ಮೀನುಗಾರಿಕೆ ಸಹಾಯಕ ನಿರ್ದೇಶಕರ ಮನೆಗೆ ಹೋಗಿ ಅವರ ಐಷಾರಾಮಿ ಮನೆಯ ಫೋಟೋ ವಿಡಿಯೋ ಮಾಡಿದ್ದ ಲೋಕಾಯುಕ್ತ ಅಧಿಕಾರಿ ಯಾರು ನಂತರ ನಡೆದ ಘಟನೆ ಏನು ಹೀಗೆ ಅನೇಕ ಕಚೇರಿಗಳಲ್ಲಿ ಭ್ರಷ್ಟಾಚಾರದ ಹಣ ವಸೂಲಿ ಮಾಡುತ್ತಿರುವ ವ್ಯಾಪಕ ಆರೋಪಗಳು ಕೇಳಿ ಬರುತ್ತಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.ತುಮಕೂರು ಲೋಕಾಯುಕ್ತ ಅಧೀಕ್ಷಕರಾದ ಲಕ್ಷ್ಮೀನಾರಾಯಣ್ , ಶಿವರುದ್ರಪ್ಪ ಮೇಟಿ, ಸುರೇಶ್, ಹಾಗೂ ಮಹಮ್ಮದ್ ಸಲೀಂ ಇನ್ಸೆಕ್ಟರ್ಗಳನ್ನು ಅತಿ ಜರೂರಾಗಿ ವರ್ಗಾವಣೆಗೊಳಿಸಿ ತುಮಕೂರು ಲೋಕಾಯುಕ್ತ ಕಚೇರಿಯನ್ನು ಭ್ರಷ್ಟಾಚಾರ ಮುಕ್ತ ಮಾಡುವಂತೆ ದೂರಿನಲ್ಲಿ ವಿನಂತಿಸಲಾಗಿದೆ.

Leave a Reply

Your email address will not be published. Required fields are marked *