ಜಾತಿ ನಿಂದನೆ ದೌರ್ಜನ್ಯ ಹಾಗು ಸಾರ್ವಜನಿಕವಾಗಿ ವಿವಸ್ತ್ರಗೊಳಿಸಿದ ಪ್ರಕರಣಕ್ಕೆ ದೂರು ನೀಡಲು ಹೋದ ಕುಟುಂಬಕ್ಕೆ ಇದೆಂಥಾ ಅವಮಾನ.

ತುಮಕೂರು -ತುಮಕೂರು ಜಿಲ್ಲೆಯಲ್ಲಿ ದಲಿತರ ಮೇಲಿನ ಹಲ್ಲೆ ಅವಮಾನ,ಅಸ್ಪಶ್ಯತೆ ಪ್ರಕರಣಗಳಿಗೆ ಮುಕ್ತಿ ಇಲ್ಲದಂತಾಗಿದೆ. ಕಳೆದ ಕೆಲದಿನಗಳ ಹಿಂದೆ ಮಧುಗಿರಿ ತಾಲೂಕಿನ ದೇವಾಲಯ ಒಂದರಲ್ಲಿ ದಲಿತ ಕುಟುಂಬದ ಯುವಕನಿಗೆ ದೇವಸ್ಥಾನದ ಒಳಗೆ ಹೋಗಲು ಬಿಡದೆ ಅವಮಾನ ಹಾಗೂ ಅಸ್ಪೃಶ್ಯ ಆಚರಣೆ ಮಾಡಿದ್ದ ಪ್ರಕರಣ ಮಾಸುವ ಮುನ್ನವೇ ತುಮಕೂರು ಜಿಲ್ಲೆಯಲ್ಲಿ ಮತ್ತೊಂದು ಅಸ್ಪೃಶ್ಯ ಆಚರಣೆ ಪ್ರಕರಣ ಬಯಲಿಗೆ ಬಂದಿದೆ.
ಈ ಬಾರಿ ಬೆಳಕಿಗೆ ಬಂದಿರುವ ಪ್ರಕರಣ ವಿಶೇಷ ಪ್ರಕರಣವಾಗಿದ್ದು ಕಾನೂನಿನ ಮೊರೆ ಹೋಗಿ ಸಹಾಯ ಪಡೆಯಲು ಮುಂದಾಗಿದ್ದ ದಲಿತ ಕುಟುಂಬವನ್ನ ಠಾಣೆಯ ಒಳಗೆ ನೆಲದ ಮೇಲೆ ಕೂರಿಸಿ ದೂರು ನೀಡಲು ಬಂದ ಕುಟುಂಬಕ್ಕೆ ಅವಮಾನಿಸಿರುವ ಘಟನೆ ವರದಿಯಾಗಿದೆ. ಇನ್ನು ಕಾನೂನು ಪಾಲನೆ ಮಾಡಿ ನೊಂದವರ ಪರ ನಿಂತು ನ್ಯಾಯ ಕೊಡಿಸಬೇಕಾದ ಪೊಲೀಸ್ ಠಾಣೆಯ ಮೇಲೆ ಈ ಬಾರಿಯ ಗಂಭೀರ ಆರೋಪ ಬಂದಿದೆ.

ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನಗರ ಠಾಣೆಯೊಂದರಲ್ಲಿ ದಲಿತ ಕುಟುಂಬವು ದೂರು ನೀಡಲು ಹೋದ ಸಂದರ್ಭದಲ್ಲಿ ನೆಲದ ಮೇಲೆ ಕೂರಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಇಂತಹದೊಂದು ಗಂಭೀರ ಆರೋಪ ಬಂದಿರುವುದು ಪೊಲೀಸ್ ಇಲಾಖೆ ಮೇಲೆ ಇದಿಷ್ಟೇ ಅಲ್ಲದೆ ಠಾಣೆಗೆ ಬಂದ ಮೂವರನ್ನು ಎಳೆದಾಡಿದ್ದು ಅಲ್ಲದೆ ವಿಡಿಯೋ ಮಾಡಿದ ಹುಡುಗನನ್ನ ಹಾಗೂ ಫೋಟೋ ತೆಗೆದ ಯುವಕನನ್ನ ಥಳಿಸಿ ಮೊಬೈಲ್ ಕಿತ್ತುಕೊಂಡು ಠಾಣೆಯಲ್ಲಿ ಕೂರಿಸಿರುವ ಪೊಲೀಸರು ಈ ಬಾರಿ ದೇಶದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ ಎಂದು ಇಡೀ ದೇಶಕ್ಕೆ ತೋರಿಸಲು ಹೊರಟಿರುವಂತಿದೆ.
ಇನ್ನು ಠಾಣೆಗೆ ಹೋದ ಸಂದರ್ಭದಲ್ಲಿ ಅವಮಾನಕ್ಕೆ ಒಳಗಾಗಿರುವ ಕುಟುಂಬದ ಪರ ನಿಲ್ಲಬೇಕಾದ ದಲಿತ ಸಂಘಟನೆಗಳ ಮುಖಂಡರು ಸಹ ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುತ್ತಿರುವುದು ಏಕೆ ಎಂಬುವ ಹಲವು ಅನುಮಾನಗಳನ್ನ ಹುಟ್ಟು ಹಾಕಿದೆ. ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಸಂತ್ರಸ್ತೇ ದೂರು ನೀಡಲು ಹೋದಂತಹ ಸಂದರ್ಭದಲ್ಲಿ ಪೊಲೀಸರು ಬೆದರಿಕೆ ಹಾಕಿ ನೆಲದ ಮೇಲೆ ಕೂರುವಂತೆ ಒತ್ತಡ ಹಾಕಿ ಇದೇ ಸಂದರ್ಭದಲ್ಲಿ ನನ್ನ ಮಗಳ ಮೇಲೆ ಕೆಲ ಪೊಲೀಸ್ ಸಿಬ್ಬಂದಿಗಳು ಹಲ್ಲೆ ಮಾಡಿದ ದೃಶ್ಯಗಳನ್ನ ಸೆರೆಹಿಡಿದಿದ್ದ ಯುವಕನ ಮೇಲು ಸಹ ಪೊಲೀಸರು ಹಲ್ಲೆ ಮಾಡಿ ಮೊಬೈಲ್ ಕಸಿದು ಫ್ಲಾಶ್ ಮಾಡಿ ಖಾಲಿ ಪೇಪರ್ ನಲ್ಲಿ ಸಹಿ ಪಡೆದು ಯುವಕನಿಗೂ ಸಹ ಬೆದರಿಕೆ ಹಾಕಿದಾರೆ ಎಂದಿರುವ ಸಂತ್ರಸ್ತೇ ಠಾಣೆಯಲ್ಲಿರುವ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನ ಆದರಿಸಿ ಸಿಬ್ಬಂದಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Photos viral in social media
ಅದೇನೆ ಇರಲಿ ಕಳೆದ ಕೆಲ ದಿನಗಳ ಹಿಂದೆ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಮುಖ್ಯಸ್ಥರು ಸಹ ಠಾಣೆಗೆ ದೂರು ನೀಡಲು ಬಂದಂತ ಸಂದರ್ಭದಲ್ಲಿ ನೋಂದವರ ಪರವಾಗಿ ನಿಂತು ಅವರಿಗೆ ಠಾಣೆಯಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಿ ನೋಂದವರಿಗೆ ಧೈರ್ಯ ತುಂಬುವ ಕೆಲಸ ಆಗಬೇಕು ಎಂಬುದು ಹಲವು ಬಾರಿ ಆದೇಶ ಆಗಿದ್ದರು ಸಹ ಇದು ಯಾವುದರ ಪರಿವೆಯು ಇಲ್ಲದೆ ದೂರು ನೀಡಲು ಬಂದ ಕುಟುಂಬವನ್ನ ಈ ರೀತಿ ಅಡೆಸಿಕೊಂಡಿರುವುದು ಎಷ್ಟು ಸರಿ ಹಾಗೂ ಸಮಾಜಕ್ಕೆ ಎಂತ ಸಂದೇಶ ಹೋಗುತ್ತದೆ ಎನ್ನುವ ಪರಿವೆಯು ಇಲ್ಲದಂತೆ ವರ್ತಿಸಿರುವ ಪೊಲೀಸ್ ಸಿಬ್ಬಂದಿಗಳ ಮೇಲೆ ಕ್ರಮ ಯಾವಾಗ ಎಂಬುದು ಪ್ರಜ್ಞಾವಂತ ನಾಗರೀಕರ ಒತ್ತಾಯವಾಗಿದೆ .
