ತುಮಕೂರಿನಲ್ಲಿ ಶೌಚಾಲಯ ಬದಿಗೆ ಬಿದ್ದ ಬಿ.ಆರ್ ಅಂಬೇಡ್ಕರ್ ಹಾಗೂ ಡಾ. ಜಗಜೀವನ ರಾಮ್ ಪೋಟೋ 

ತುಮಕೂರಿನಲ್ಲಿ ಶೌಚಾಲಯ ಬದಿಗೆ ಬಿದ್ದ ಬಿ.ಆರ್ ಅಂಬೇಡ್ಕರ್ ಹಾಗೂ ಡಾ. ಜಗಜೀವನ ರಾಮ್ ಪೋಟೋ 

ತುಮಕೂರು: ದೇಶ ಸೇರಿದಂತೆ ಇಡೀ ಪ್ರಪಂಚಕ್ಕೆ ಸಂವಿಧಾನದ ಪಿತಾಮಹ ಈ ನಾಡಿನ ಎಲ್ಲಾ ಜನರ ಆಶಾಕಿರಣ ವಿಶ್ವಜ್ಞಾನಿ ಡಾ ಬಿ.ಆರ್ ಅಂಬೇಡ್ಕರ್ ಅವರು ಮತ್ತು ದೇಶದಲ್ಲಿ ಹಸಿರು ಕ್ರಾಂತಿ, ಹುಟ್ಟು ಹಾಕಿದ ಅನ್ನದಾತ ಡಾ ಬಾಬು ಜಗಜೀವನ್ ರಾಮ್ ಎಂದರೆ ನಾಡಿನ ಜನತೆಗೆ ಎಲ್ಲಿಲ್ಲದ ಪ್ರೀತಿ ಆದರೆ ಇಂತಹ ಮಹಾನ್ ನಾಯಕರಿಗೆ ಅವಮಾನ ಮಾಡುವಂತಹ ಅಗೌರವ ತರುವಂತಹ ಘಟನೆ ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಇರುವ ಶೌಚಾಲಯದ ಹಿಂಬಾಗ ನಡೆದಿದೆ.

 

 

 

 

 

ಗೃಹ ಸಚಿವರ ತವರು ಜಿಲ್ಲೆಯಲ್ಲಿ ಮಹಾ ನಾಯಕರಿಗೆ ಗೌರವ ಇಲ್ಲದಂತಾಗಿದ್ದು ಯಾರೋ ಕಿಡಿಗೇಡಿಗಳು ಶೌಚಾಲಯದ ಮೂಲೆಯಲ್ಲಿ ಮಹಾನ್ ನಾಯಕರ ಫೋಟೋಗಳನ್ನು ತಂದು ಎಸೆದು ಅವಮಾನ ಮಾಡಿದ್ದಾರೆ.

 

 

 

 

ಈ ಘಟನೆಯನ್ನು ಖಂಡಿಸಿ, ದಲಿತ ಜನಾಂದೋಲನ ಸಮಿತಿಯ ಪದಾಧಿಕಾರಿಗಳು ಈ ಕೃತ್ಯ ಗೈದಿರುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

 

 

 

 

ಕಳೆದ ಹತ್ತು ದಿನಗಳ ಹಿಂದೆ ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿಗೆ ಹುಸಿ ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ 3 ಗೇಟ್ಗಳಲ್ಲಿ ಭದ್ರತೆ ಹೆಚ್ಚಿಸಿದ್ದ ಪೊಲೀಸ್ ಇಲಾಖೆ ಕಳೆದ ಮೂರು ದಿನಗಳ ಹಿಂದೆ ಬಂದೋಬಸ್ತು ಹಿಂಪಡೆದಿದ್ದ ನಂತರ ಘಟನೆ ನಡೆದಿದ್ದು ಕಿಡಿಗೇಡಿಗಳು ಕೆಟ್ಟ ಹೆಸರು ತರಲೆಂದೇ ತಂದು ಹಾಕಿದ್ದಾರೋ….??? ಎನ್ನುವ ಅನುಮಾನ ಹುಟ್ಟು ಹಾಕಿದೆ.

 

 

 

 

 

ಇನ್ನು ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಜಿಲ್ಲೆಯ ದಲಿತ ಮುಖಂಡರಿಂದ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು ಕೂಡಲೇ ಆರೋಪಿಗಳ ಬಂಧನ ಆಗಬೇಕು ಎಂದು ಒತ್ತಾಯಿಸಿದ್ದಾರೆ.

 

 

 

 

ಅದೇನೇ ಇರಲಿ ದೇಶ ಕಂಡ ಇಬ್ಬರು ಮಹಾನ್ ನಾಯಕರಿಗೆ ಈ ರೀತಿಯ ಅಗೌರವ ತಂದ ಕಿಡಿಗೇಡಿಗಳ ಬಂಧನ ಆಗಬೇಕಿದೆ.

Leave a Reply

Your email address will not be published. Required fields are marked *