ಸದ್ದಿಲ್ಲದೆ ತುಮಕೂರು  ಆರ್. ಟಿ ಓ ಕಚೇರಿಯ ಬೋನೋ ಫೈಡ್ ಹಗರಣ ಹೊರ ತರಲು ಮುಂದಾದ  ಬೆಂಗಳೂರಿನ ಲೋಕಾಯುಕ್ತ ಅಧಿಕಾರಿಗಳು.

ಸದ್ದಿಲ್ಲದೆ ತುಮಕೂರು  ಆರ್. ಟಿ ಓ ಕಚೇರಿಯ ಬೋನೋ ಫೈಡ್ ಹಗರಣ ಹೊರ ತರಲು ಮುಂದಾದ  ಬೆಂಗಳೂರಿನ ಲೋಕಾಯುಕ್ತ ಅಧಿಕಾರಿಗಳು.

 

 

 

 

ತುಮಕೂರು – ಕಳೆದ ವರ್ಷದ ನವಂಬರ್ ತಿಂಗಳಿನಲ್ಲಿ  ತುಮಕೂರಿನ ಆರ್‌ಟಿಓ ಕಚೇರಿಯಲ್ಲಿ ನೂರಾರು ಟ್ರ್ಯಾಕ್ಟರ್ ಗಳಿಗೆ ಸಂಬಂಧಿಸಿದಂತೆ ನಕಲಿ ಬೋನೋ ಫೈಡ್ ನೀಡಿ ಕೋಟ್ಯಂತರ ರೂಗಳ ಹಗರಣ ಸಂಬಂಧ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತುಮಕೂರಿನ ಲೋಕಾಯುಕ್ತ ಅಧಿಕಾರಿಗಳು ಕಚೇರಿಯ ಮೇಲೆ  ದಾಳಿ ನಡೆಸಿ ಭ್ರಷ್ಟಾಚಾರ ಹೊರ ತರಲು ಮುಂದಾಗಿದ್ದ ವಿಷಯ ಎಲ್ಲರಿಗೂ ಗೊತ್ತಿರುವಂತದ್ದು.

 

 

 

 

 

 

 

 

 

 

 

 

 

ಇನ್ನು ತುಮಕೂರಿನ ಆರ್ ಟಿ ಓ ಕಚೇರಿಯ ಅಧಿಕಾರಿಗಳು ಹಾಗೂ  ಬೆರಳೆಣಿಕೆಯ ಮಂದಿ ಬ್ರೋಕರ್ಗಳ ಮನೆ ಮೇಲೆ ಸಹ  ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಹಲವು ದಾಖಲೆಗಳನ್ನು ಅವರುಗಳ ಮನೆಗಳು ಹಾಗೂ ಆರ್ ಟಿ ಓ ಕಚೇರಿಯಲ್ಲಿ ಇದ್ದ  ದಾಖಲೆಗಳನ್ನು ಒಂದು ಕೊಠಡಿಯಲ್ಲಿ ಇಟ್ಟು ಬೀಗ ಹಾಕಿದ ಅಧಿಕಾರಿಗಳು ಯಾವುದೇ ಮುಂದಿನ ತನಿಖೆ ನಡೆಸದೆ ಸುಮ್ಮನಾಗಿದ್ದು ಇದರ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು.

 

 

 

 

 

 

 

 

 

 

 

 

 

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಒಂದು ವರ್ಷದ ಹಿಂದೆ ನಡೆದ ದಾಳಿಗೆ ಸಂಬಂಧಿಸಿದಂತೆ ತುಮಕೂರಿನ ಲೋಕಾಯುಕ್ತ ಅಧಿಕಾರಿಗಳ ಮೇಲೆಯೇ  ಭ್ರಷ್ಟಾಚಾರದ ಆರೋಪ ಮಾಡಿದ ತುಮಕೂರಿನ ಆರ್. ಟಿ. ಐ ಕಾರ್ಯಕರ್ತರಾದ ರಮೇಶ್ ಎಂಬುವವರು ಬೆಂಗಳೂರಿನ ಲೋಕಾಯುಕ್ತ ಕಚೇರಿಯ ಕದ ತಟ್ಟಿದ ಅವರು ಉಪಲೋಕಾಯುಕ್ತರಿಗೆ ದೂರು ಸಲ್ಲಿಸಿ ತುಮಕೂರಿನ ಆರ್‌ಟಿಓ ಅಧಿಕಾರಿಗಳೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಈ ಕುರಿತಂತೆ ಸಮಗ್ರ ತನಿಖೆ ನಡೆಸಬೇಕು ಎಂದು ದೂರು ನೀಡಿದ್ದರು.

 

 

 

 

 

 

 

ಆದರೆ ದೂರು ಸಲಿಕೆಯಾಗಿ ಹಲವು ತಿಂಗಳುಗಳು ಕಳೆದರು ಪ್ರಕರಣದ ತನಿಕೆ ಕೈಗೊಂಡಿರದ ಲೋಕಾಯುಕ್ತ ಅಧಿಕಾರಿಗಳು ತಮಗೂ ಇದಕ್ಕೂ ಸಂಬಂಧವಿಲ್ಲವೇನೋ ಎಂಬಂತೆ ಸುಮ್ಮನಾಗಿದ್ದರು.

 

 

 

ಆದರೆ ಪ್ರಕರಣದ ಗಂಭೀರತೆ ಅರಿತ ಬೆಂಗಳೂರಿನ ಲೋಕಾಯುಕ್ತ ಅಧಿಕಾರಿಗಳು ಕಳೆದ ಎರಡು ದಿನಗಳ ಹಿಂದೆ ತುಮಕೂರಿಗೆ ಭೇಟಿ ನೀಡಿ ಆರ್‌ಟಿಓ ಕಚೇರಿಯ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು ಬೋನೊಫೈಡ್ ಹಗರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಕೆದಕುತ್ತಿದ್ದು ಬ್ರಷ್ಟಾಚಾರದಲ್ಲಿ ಭಾಗಿಯಾದ ಅಧಿಕಾರಿಗಳು ನೌಕರರು ಹಾಗೂ ಬ್ರೋಕರ್ಗಳಿಗೆ ಲೋಕಾಯುಕ್ತ ಅಧಿಕಾರಿಗಳು ನಿದ್ದೆಗೆಡಿಸಿದ್ದಾರೆ.

 

 

 

ಬೆಂಗಳೂರು ಹಾಗೂ ತುಮಕೂರಿನ ಲೋಕಾಯುಕ್ತ ಕಚೇರಿಗಳ ಸಿಬ್ಬಂದಿಗಳನ್ನು ಸೇರಿಕೊಂಡಂತೆ 15ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಅಧಿಕಾರಿಗಳು ಆರ್‌ಟಿಓ ಕಚೇರಿಯ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

 

 

 

 

 

ಇನ್ನು ತನಿಖೆಯ ನೇತೃತ್ವ ವಹಿಸಿರುವ ಲೋಕಾಯುಕ್ತ ಅಧಿಕಾರಿಗಳಾದ ಸಂತೋಷ್ ಮಂಜುನಾಥ್ ರಾಜು ಸೇರಿದಂತೆ ಹಲವು ಅಧಿಕಾರಿಗಳು ತನಿಖೆಯಲ್ಲಿ ಭಾಗಿಯಾಗಿದ್ದಾರೆ.

 

 

 

 

ಅದೇನೇ ಇರಲಿ ಭ್ರಷ್ಟಾಚಾರದಲ್ಲಿ ಭಾಗಿಯಾದ ಅಧಿಕಾರಿಗಳ ನಿದ್ದೆಗೆಡಿಸುವಲ್ಲಿ ಕರ್ನಾಟಕ ಲೋಕಾಯುಕ್ತ ಮುಂದಾಗಿದ್ದು ಅಂತಹ ಇಲಾಖೆಯಲ್ಲಿ ಸೇರಿಕೊಂಡ ಕೆಲ ಸಿಬ್ಬಂದಿಗಳು ಅಧಿಕಾರಿಗಳು ಸಹ ಬ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬ ಆರೋಪ ಕೇಳಿ ಬಂದಿರುವುದು ಇದೆ ಮೊದಲು .

 

 

 

 

 

ಇನ್ನಾದರೂ ತನಿಖೆ ಗಿಳಿದಿರುವ ಬೆಂಗಳೂರಿನ ಲೋಕಾಯುಕ್ತ ಅಧಿಕಾರಿಗಳು ಸಂಪೂರ್ಣ ತನಿಖೆ ನಡೆಸಿ ಹಗರಣದಲ್ಲಿ ಭಾಗಿಯಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳುವರೇ ಕಾದು ನೋಡಬೇಕಿದೆ……??

Leave a Reply

Your email address will not be published. Required fields are marked *