ತುಮಕೂರು ನಗರದಲ್ಲಿ ಆಯೋಜಿಸಲಾಗಿರುವ ‘ಆಪರೇಷನ್ ಸಿಂಧೂರ್’ ವಿಜಯೋತ್ಸವ ಸಮಾರಂಭ.

ತುಮಕೂರು : ಕಾಶ್ಮೀರದ ಪೆಹಾಲ್ಗಮ್ ನ ಬೈಸಾರನ್ ಕಣಿವೆಯಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ನಿರಪರಾಧಿ ಪ್ರವಾಸಿಗರು ಪ್ರಾಣ ಕಳೆದುಕೊಂಡರು. ರಾಷ್ಟ್ರದ ಭದ್ರತೆಯನ್ನು ಸವಾಲು ಹಾಕಿದ ಈ ಕೃತ್ಯಕ್ಕೆ ಪ್ರತಿಕಾರವಾಗಿ, ಮೇ 7 ರಂದು ಭಾರತದ ಭದ್ರತಾ ಪಡೆಗಳು ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನೆರವೇರಿಸಿದೆ ಇದರ ಅಂದವಾಗಿ ಆಗಸ್ಟ್ 30 ರಂದು ವಿಜಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದರು.
ಅವರು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಈ ವಿಜಯವು ಕೇವಲ ಸೇನಾ ಯಶಸ್ಸಲ್ಲ – ಇದು ರಾಷ್ಟ್ರದ ಗೌರವ, ಶೌರ್ಯ ಮತ್ತು ಅಚಲ ಬದ್ಧತೆಯ ಸಂಕೇತವಾಗಿದೆ.ಈ ಮಹತ್ವದ ಕಾರ್ಯಾಚರಣೆಯ ಸ್ಮರಣಾರ್ಥವಾಗಿ, ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಅದ್ಧೂರಿ ವಿಜಯೋತ್ಸವ ಸಮಾರಂಭವನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾರ್ಯಾಚರಣೆಯ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರವಹಿಸಿದ ದೇಶಭಕ್ತರು, ವಿಜ್ಞಾನಿಗಳು ಹಾಗೂ ಶೌರ್ಯಶಾಲಿ ವ್ಯಕ್ತಿತ್ಯಗಳನ್ನು ಗೌರವಿಸಲಾಗುವುದು ರಾಜ್ಯಪಾಲರಾದ ವಿಜಯಶೆಂಕರ್,ಇಸ್ರೋ ಮುಖ್ಯಸ್ಥ ಕಿರಣ್ ಕುಮಾರ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ,ಹೆಚ್ ಡಿ ಕುಮಾರ ಸ್ವಾಮಿ, ಸಂಸದ ತೇಜಸ್ವಿ ಸೂರ್ಯ, ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸಚಿವರು, ಪ್ರತಿಷ್ಠಿತ ವಿಜ್ಞಾನಿಗಳು ಹಾಗೂ ಮಠಾಧೀಶರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ,ತುಮಕೂರಿನ ಕಾಲೇಜು ವಿದ್ಯಾರ್ಥಿಗಳು,ನಾಗರೀಕರು,ಸಂಘಸಮಸ್ಥೆಗಳ ಮುಖಂಡರು ಭಾಗವಹಿಸಿ ಕಾರ್ಯಕ್ರಮ ಯಶಸ್ಸಿಗೆ ಸಹಕಾರ ನೀಡಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸಂಪಿಗೆ ಜಗದೀಶ್,ಧನಿಯಕುಮಾರ್,ಪಂಚಾಕ್ಷರಯ್ಯ,ಡಾಕ್ಟರ್ ಪರಮೇಶ್ವರ, ಆಶಾ ಪ್ರಸನ್ನಕುಮಾರಿ,ಪ್ರಭಾಕರ್ ಮತ್ತಿತರರು ಹಾಜರಿದ್ದರು.
