ಹೈ ಕೋರ್ಟ್ ಸರ್ಕಾರಿ ಅಭಿಯೋಜಕರ ಮನೆಗೆ ನುಗ್ಗಿ ಗನ್ ನಿಂದ ಶೂಟ್ ಮಾಡುವುದಾಗಿ ಮಹಿಳೆ ಬೆದರಿಕೆ, ಎಫ್.ಐ.ಆರ್ ದಾಖಲು.

ತುಮಕೂರು – ಕಳೆದ ಮೂರು ದಿನಗಳ ಹಿಂದೆ ಚಿಂತಾಮಾಣಿಯ ವಕೀಲರ ಕಚೇರಿಗೆ ನುಗ್ಗಿ ಚಾಕುವಿನಿಂದ ಇರಿದ ಪ್ರಕರಣ ಮಾಸುವ ಮುನ್ನವೇ ಮತ್ತ್ತೊಂದು ಆಘಾತಕಾರಿ ಘಟನೆ ವರದಿಯಾಗಿದೆ.
ಹೈಕೋರ್ಟ್ ನ ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕರಾದ ಸೂರ್ಯ ಮುಕುಂದರಾಜ್ ರವರು ವಾಸ ಮಾಡುವ ಮನೆಯಾದ ತುಮಕೂರಿನ ಗೂಳೂರು ಬಳಿಯ ದೊಡ್ಡ ಹೊಸೂರಿನಲ್ಲಿ ಇರುವ ಮನೆಗೆ ನುಗ್ಗಿದ ಅಪರಿಚಿತ ಮಹಿಳೆ ಗುರುವಾರ ನಕಲಿ ಕೀ ಬಳಸಿ ಅಕ್ರಮವಾಗಿ ಮನೆ ಪ್ರವೇಶಿಸಿ ಬೃಹತ್ ಹೈಡ್ರಾಮ ಸೃಷ್ಟಿ ಮಾಡಿದ್ದಾಳೆ.

ಘಟನೆ ಸಂಬಂಧ ಮಾಹಿತಿ ಪಡೆಯಲು ಬಂದ ಪೊಲೀಸರ ಮುಂದೆ ಮಹಿಳೆಯು ತನ್ನ ಬಳಿ ಸ್ವಂತ ರಿವಲ್ವಾಲ್ ಇದ್ದು ಗುಂಡು ಹಾರಿಸುತ್ತೇನೆ ಎಂದಿದ್ದಾಳೆ ಆತ್ಮ ರಕ್ಷಣೆಗಾಗಿ ನಾನು ಗುಂಡು ಹಾರಿಸಲು ಸಿದ್ಧಳಿದ್ದು ಯಾರು ತೊಂದರೆ ನೀಡಬೇಡಿ ಎಂದು ಪೊಲೀಸರ ಮುಂದೆಯೇ ಆತಂಕ ಸೃಷ್ಟಿ ಮಾಡಿದ್ದಾಳೆ.
ಇದೇ ಸಂದರ್ಭದಲ್ಲಿ ಪೊಲೀಸರು ಮಹಿಳೆಯ ಮನವೊಲಿಸಲು ಮುಂದಾದರೂ ಅವರ ಮಾತು ಕೇಳದ ಅಪರಿಚಿತ ಮಹಿಳೆ ಮನೆ ಒಳಗಿನಿಂದ ಡೋರ್ ಲಾಕ್ ಮಾಡಿಕೊಂಡು ಸತಾಯಿಸಿದ್ದಾಳೆ.
ಇದೇ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಇತರರ ಮೇಲೆ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದ್ದಾಳೆ.
ಪ್ರಕರಣ ಸಂಬಂಧ ಸೂರ್ಯ ಮುಕುಂದರಾಜ್ ರವರ ಆಪ್ತರು ನೀಡಿದ ದೂರಿನ ಅನ್ವಯ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದಾರೆ.
ಇದೇ ವೇಳೆ ಯಾರೊಬ್ಬರನ್ನು ಮನೆಯೊಳಗೆ ಬಿಟ್ಟುಕೊಳ್ಳದ ಮಹಿಳೆ ಶುಕ್ರವಾರ ಸಂಜೆ ಬಾಗಿಲು ತೆರೆದಿದ್ದು.
ಎಫ್.ಐ.ಆರ್ ದಾಖಲಾದ ಹಿನ್ನೆಲೆ ಮಹಿಳೆಯ ಬಂಧನಕ್ಕೆ ತೆರಳಿದ ಪೊಲೀಸರ ಕೈ ಇಂದ ತಪ್ಪಿಸಿಕೊಂಡು ಮಹಿಳೆ ಸ್ಥಳದಿಂದ ಪರಾರಿಯಾಗಿದ್ದಾಳೆ ಎನ್ನಲಾಗಿದೆ.
ಮನೆ ಮಾಲೀಕರೊಂದಿಗಿನ ಹಣದ ವ್ಯವಹಾರವೇ ಘಟನೆಗೆ ಕಾರಣ ಎನ್ನಲಾಗಿದೆ ಪೋಲೀಸರ ತನಿಖೆ ಇಂದ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ಘಟನೆ ಸಂಬಂಧ ನಾಪತ್ತೆಯಾದ ಮಹಿಳೆಯ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
