ತುಮಕೂರಲ್ಲಿ ಹರಿದ ನೆತ್ತರು ಮಲ್ಲ ಬರ್ಬರ ಹತ್ಯೆ

ತುಮಕೂರು – ತುಮಕೂರಿನಲ್ಲಿ ವ್ಯಕ್ತಿ ಒಬ್ಬನನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ.
ಕೊಲೆಯಾದ ವ್ಯಕ್ತಿಯನ್ನು ವೀರಣ್ಣ ಅಲಿಯಾಸ್ ಮಲ್ಲ ಎಂದು ಗುರುತಿಸಲಾಗಿದ್ದು ಬೆಳಗುಂಬ ಗ್ರಾಮದ ಬೆಳಗುಂಬ ತೋಟದ ಬಳಿ ವಾಸ ಇದ್ದ ಎನ್ನಲಾಗಿದೆ.
ಇಂದು ಹಾಡು ಹಗಲೇ ಮನೆಯ ಬಳಿ ಬೈಕ್ ನಲ್ಲಿ ಹೋಗುತ್ತಿದ್ದಾಗ ಏಕಾಏಕಿ ದುಷ್ಕರ್ಮಿಗಳ ಗುಂಪು ಆತನ ಮೇಲೆ ಹಲ್ಲೆ ಪರಾರಿಯಾಗಿದೆ ಎನ್ನಲಾಗಿದ್ದು ಮಲ್ಲ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಇನ್ನು ಮಲ್ಲ ತನ್ನ ಮೇಲೆ ದಾಖಲಾಗಿದ್ದ ಪ್ರಕರಣದಲ್ಲಿ ಖುಲಸೆ ಗೊಂಡಿದ್ದ ಎನ್ನಲಾಗಿದೆ.
ಬೆಳಗುಂಬ ಮುಖ್ಯ ರಸ್ತೆಯಲ್ಲಿರುವ ಗರುಡ ಟೀ ಸ್ಟಾಲ್ ಬಳಿ ಹತ್ಯೆ ಮಾಡಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಗ್ರಾಮಾಂತರ ಮತ್ತು ಕ್ಯಾತ್ಸಂದ್ರ ಪೊಲೀಸರು ದಡಾಯಿಸಿದ್ದು ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಸಹ ಭೇಟಿ ನೀಡಿದ್ದಾರೆ.
2008ರಲ್ಲಿ ಪ್ರಕರಣ ದಾಖಲಾಗಿದ್ದು ಅ ಪ್ರಕಾರದಲ್ಲಿ ಸಹ ಮಲ್ಲ ಖುಲಾಸೆ ಗೊಂಡಿದ್ದ ಎಂದು ತಿಳಿದು ಬಂದಿದೆ gambling ನಲ್ಲಿ ಆತನ ಹೆಸರು ಕೇಳಿ ಬಂದಿತ್ತು.
ಕೊಲೆ ಮಾಡಿರುವ ಆರೋಪಿಗಳು ತಲೆ ಹಾಗೂ ಮುಖದ ಮೇಲೆ ಗಂಭೀರ ಹಲ್ಲೆ ಮಾಡಿರುವ ಪ್ರಯುಕ್ತ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ದಾಖಲಾಗಿದ್ದ ರೌಡಿ ಶೀಟ್ ಸಹ ಕ್ಲೋಸ್ ಮಾಡಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ ಪರಿಚಯದ ವ್ಯಕ್ತಿಗಳೇ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು ಪೊಲೀಸರು ಎಲ್ಲಾ ಆಯಾಮದಲ್ಲೂ ತನಿಖೆ ಕೈಗೊಂಡಿದ್ದಾರೆ.
ಮೃತ ದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ
