ತುಮಕೂರು ಜಿಲ್ಲಾ ಪೊಲೀಸ್ ಇತಿಹಾಸದಲ್ಲೇ ಅತಿ ದೊಡ್ಡ ಮೆಗಾ ರೈಡ್.!

ತುಮಕೂರು ಜಿಲ್ಲಾ ಪೊಲೀಸ್ ಇತಿಹಾಸದಲ್ಲೇ ಅತಿ ದೊಡ್ಡ ಮೆಗಾ ರೈಡ್.!

 

 

ತುಮಕೂರು – ತುಮಕೂರು ಜಿಲ್ಲಾ ಪೊಲೀಸ್ ಇಲಾಖೆಯ ಇತಿಹಾಸದಲ್ಲೇ ಅತೀ ದೊಡ್ಡ ದಾಳಿ ನಡೆಸಲಾಗಿದೆ.

 

 

 

ಅಕ್ರಮ ಗೋಶಾಲೆಯ ಹೆಸರಿನಲ್ಲಿ ನಡೆಯುತ್ತಿದ್ದ ಸ್ಥಳದ ಮೇಲೆ ಅತಿ ದೊಡ್ಡ ದಾಳಿಯನ್ನು ತುಮಕೂರು ಜಿಲ್ಲಾ ಪೊಲೀಸರು ನಡೆಸಿದ್ದಾರೆ.

 

 

 

 

ತುಮಕೂರು ನಗರದ ಹೃದಯ ಭಾಗದಲ್ಲಿರುವ ವಾರ್ಡ್ ಸಂಖ್ಯೆ ಹನ್ನೊಂದರಲ್ಲಿ ರಾಜೀವ್ ಗಾಂಧಿ ನಗರದಲ್ಲಿ ಬಕ್ರೀದ್ ಹಬ್ಬಕ್ಕಾಗಿ ಬಳಸಲು ಕೂಡಿ ಹಾಕಲಾಗಿದ್ದ ಸುಮಾರು 80ಕ್ಕೂ ಹೆಚ್ಚು ಗೋವುಗಳನ್ನ ತುಮಕೂರು ಜಿಲ್ಲಾ ಪೊಲೀಸರು ರಕ್ಷಿಸಿದ್ದಾರೆ .

 

 

 

 

ಖಚಿತ ಮಾಹಿತಿಯ ಮೇಲೆ ತುಮಕೂರು ವಿಭಾಗದ 60ಕ್ಕೂ ಪೊಲೀಸರೊಂದಿಗೆ ಅಕ್ರಮವಾಗಿ ಗೋವುಗಳನ್ನು ಕೂಡಿ ಹಾಕಲಾಗಿದ್ದ ಶೆಡ್ ಮೇಲೆ ದಿಢೀರ್ ದಾಳಿ ನಡೆಸಿದ ಪೊಲೀಸರು ಸುಮಾರು 80ಕ್ಕೂ ಹೆಚ್ಚು ಗೋವುಗಳನ್ನು ರಕ್ಷಣೆ ಮಾಡಿ ಗುಬ್ಬಿ ತಾಲೂಕಿನ ಗೋಶಾಲೆಗೆ ರವಾನಿಸಿದ್ದಾರೆ.

 

 

 

ಸ್ಥಳದಲ್ಲಿದ್ದ ಗೋವುಗಳನ್ನ ಸುಮಾರು 8ಕ್ಕೂ ಹೆಚ್ಚು ಕ್ಯಾಂಟರ್ ಗಾಡಿಗಳಲ್ಲಿ ಗೋ ಶಾಲೆಗೆ ರವಾನಿಸಿದ್ದಾರೆ.

 

 

 

ಮಹಮ್ಮದ್ ಇಕ್ಬಾಲ್ ಅನ್ಸಾರಿ ಎಂಬವರ ಖಾಸಗಿ ಜಾಗದಲ್ಲಿ ಕಟ್ಟಿ ಹಾಕಲಾಗಿದ್ದ ಗೋವುಗಳನ್ನ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಬಳಸಲು ಮುಂದಾಗಿದ್ದರು ಎನ್ನಲಾಗಿದೆ.

 

 

 

ದಿಡೀರ್ ದಾಳಿಯಲ್ಲಿ ವಶಪಡಿಸಿಕೊಂಡ ಗೋವುಗಳ ಮೌಲ್ಯ ಸರಿಸುಮಾರು 20 ಲಕ್ಷಕ್ಕೂ ಹೆಚ್ಚು ಎನ್ನಲಾಗಿದೆ.

 

 

 

 

ತಿಲಕ್ ಪಾರ್ಕ್ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ನದಾಫ್, ತಿಲಕ್ ಪಾರ್ಕ್ ಪೊಲೀಸ್ ಠಾಣೆಯ ಪಿಎಸ್ಐ ಯೋಗೀಶ್ ಪದ್ಮಾವತಿ,ಎಎಸ್ಐ ತಿಪ್ಪೇಸ್ವಾಮಿ ಸೇರಿದಂತೆ ಹಲವು ಹಿರಿಯ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು.

 

 

 

 

 

 

 

 

 

ಅದೇನೇ ಇರಲಿ ತುಮಕೂರು ಜಿಲ್ಲಾ ಪೊಲೀಸ್ ಇಲಾಖೆಯ ಇತಿಹಾಸದಲ್ಲೇ ಇಂತಹದೊಂದು ಕಾರ್ಯಾಚರಣೆ ನಡೆದದ್ದು ಇದೆ ಮೊದಲು ಎನ್ನಲಾಗಿದೆ.

 

 

 

 

 

ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಸ್ಥಳಕ್ಕೆ ಹಿರಿಯ ಪೊಲೀಸ ಅಧಿಕಾರಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

 

ವರದಿ – ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *