ವಕೀಲೆ ಮೇಲೆ ಹಲ್ಲೆ, ಬಡವನಹಳ್ಳಿ ಪಿಎಸ್ಐ ವಿರುದ್ಧ ಐ.ಜಿ ಗೆ ದೂರು ಸಲ್ಲಿಕೆ.

ವಕೀಲೆ ಮೇಲೆ ಹಲ್ಲೆ, ಬಡವನಹಳ್ಳಿ ಪಿಎಸ್ಐ ವಿರುದ್ಧ ಐ.ಜಿ ಗೆ ದೂರು ಸಲ್ಲಿಕೆ.

 

 

ತುಮಕೂರು /ಮಧುಗಿರಿ – ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಬಡವನಹಳ್ಳಿ ಪೊಲೀಸ್ ಠಾಣಾಧಿಕಾರಿಗಳ ವಿರುದ್ಧ ಬೆಂಗಳೂರಿನ ಡಿ.ಜಿ ಐ.ಜಿ ರವರಿಗೆ ದೂರು ಸಲ್ಲಿಕೆಯಾಗಿದೆ.

 

 

 

 

 

ಬಡವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಓಬನಹಳ್ಳಿ ಗ್ರಾಮದ ವಾಸಿ ಜಯಮ್ಮ ಎಂಬುವರ ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಜಯಮ್ಮ ಎಂಬುವವರ ಜಮೀನು ಸರ್ವೆ ಕಾರ್ಯಕ್ಕಾಗಿ ಕೋರ್ಟ್ ಆದೇಶದಂತೆ ಮಧುಗಿರಿ ಸಹಾಯಕ ಭೂ-ದಾಖಲೆಗಳ ನಿರ್ದೇಶಕರು ಜಮೀನು ಸರ್ವೆ ಕಾರ್ಯಕ್ಕೆಂದು ಸ್ಥಳಕ್ಕೆ ಖುದ್ದು ಭೇಟಿ ನೀಡಿದ ವೇಳೆ ಓಬನಹಳ್ಳಿ ಗ್ರಾಮದ ನಾಗರಾಜ್ ಹಾಗೂ ನವೀನ್ ಸೇರಿದಂತೆ ಹಲವರು ಜಮೀನು ಸರ್ವೆ ಕಾರ್ಯಕ್ಕೆ ಅಡ್ಡಿ ಪಡಿಸುತ್ತಿದ್ದ ವೇಳೆ.

 

 

 

ಅದನ್ನು ಪ್ರಶ್ನಿಸಲು ಮುಂದಾದ ಜಯಮ್ಮ ರವರ ಸೊಸೆ ಹಾಗೂ ವಕೀಲರಾಗಿ ಕೆಲಸ ಮಾಡುತ್ತಿರುವ ಕಾವ್ಯ ಎಂಬುವವರ ಮೇಲೆ ನವೀನ್, ನಾಗರಾಜು ಸೇರಿದಂತೆ ಹಲವರು ಏಕಾಏಕಿ ಕಾವ್ಯ ರವರ ಮೇಲೆ ಹಲ್ಲೆ ಮಾಡಿದ್ದು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಗೆ ದೂರು ಸಲ್ಲಿಸಿದ ವೇಳೆ ಬಡವನಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಪ್ರಕಾಶ್ ರವರು ಕಾವ್ಯ ರವರು ನೀಡಿದ ದೂರಿಗೆ ಎಫ್ಐಆರ್ ದಾಖಲಿಸದೆ ಕಾಲಹರಣ ಮಾಡಿ ಹಲ್ಲೆಗೊಳಗಾದ ಕಾವ್ಯ ರವರು ನೀಡಿದ ದೂರನ್ನು ದಾಖಲಿಸದೆ ಬೆದರಿಕೆ ಹಾಕಿ ಅವರಿಂದಲೇ ಮತ್ತೊಂದು ದೂರನ್ನ ಬರೆಸಿ ಆರೋಪಿಗಳ ರಕ್ಷಣೆಗೆ ಮುಂದಾಗಿ ದೂರನ್ನು ತಿರುಚಿ ತಮ್ಮ ನಿರ್ಲಕ್ಷವನ್ನ ಮುಚ್ಚಿ ಹಾಕಿಕೊಳ್ಳಲು ಸುಳ್ಳು ಅಂಶ ಸೇರಿಸಿ ಆರೋಪಿಗಳಿಗೆ ಅನುಕೂಲ ಮಾಡುವ ಹಿನ್ನೆಲೆಯಲ್ಲಿ ತನಗೆ ಅನ್ಯಾಯ ಮಾಡಲಾಗಿದೆ ಎಂದು ಕಾವ್ಯ ರವರು ತುಮಕೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೂಲಕ ಬೆಂಗಳೂರಿನ ಐಜಿ,ಡಿಐಜಿ ರವರಿಗೆ ದೂರು ಸಲ್ಲಿಕೆ ಮಾಡಿದ್ದಾರೆ.

 

 

Leave a Reply

Your email address will not be published. Required fields are marked *