ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಗೆ ಬಾಂಬ್ ಬೆದರಿಕೆ ಮೇಲ್ ಮುಂದಿನ ಎರಡು ದಿನ ನಗರದಲ್ಲಿ ಹೈ ಅಲರ್ಟ್ – ಎಸ್. ಪಿ ಅಶೋಕ್. ಕೆ. ವಿ 

ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಗೆ ಬಾಂಬ್ ಬೆದರಿಕೆ ಮೇಲ್ ಮುಂದಿನ ಎರಡು ದಿನ ನಗರದಲ್ಲಿ ಹೈ ಅಲರ್ಟ್ – ಎಸ್. ಪಿ ಅಶೋಕ್. ಕೆ. ವಿ 

 

ತುಮಕೂರು – ಮಂಗಳವಾರ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕೃತ ವೆಬ್ ಸೈಟ್ ಗೆ ಬಾಂಬ್ ಬೆದರಿಕೆ ಸಂದೇಶ  ಬಂದ ಹಿನ್ನಲೆಯಲ್ಲಿ  ತುಮಕೂರು ನಗರದಾದ್ಯಂತ  ಮುಂದಿನ ಎರಡು ದಿನ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ ವಿ ತಿಳಿಸಿದ್ದಾರೆ.

 

 

 

 

ಬೆದರಿಕೆ ಸಂದೇಶ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ವರಿಷ್ಠಾಧಿಕಾರಿ ಅಶೋಕ್ ಕೆ ವಿ ರವರು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು  ಮಂಗಳವಾರ ಬೆಳಗ್ಗೆ 7:00 ಸಮಯದಲ್ಲಿ ಜಿಲ್ಲಾಧಿಕಾರಿಗಳ ಅಧಿಕೃತ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ಕಚೇರಿ ಸಿಬ್ಬಂದಿಗಳು ತಿಳಿಸಿದ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಎಲ್ಲಾ ಕಚೇರಿಗಳನ್ನು ತಪಾಸಣೆ ಮಾಡಲಾಗಿ  ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದ ಅವರು.

 

 

 

 

ಬೆದರಿಕೆ ಮೇಲ್ ಬಂದ  ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಎಲ್ಲಾ ಆಯಮದಲ್ಲೂ ತನಿಖೆ ನಡೆಸಲಾಗುವುದು , ಮುಂದಿನ ಎರಡು ದಿನಗಳ ಕಾಲ ತುಮಕೂರು ನಗರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಿ ನಗರದ ಬಸ್ಟ್ಯಾಂಡ್ ರೈಲ್ವೆ ಸ್ಟೇಷನ್ ಕೋರ್ಟ್ ಕಾಂಪ್ಲೆಕ್ಸ್ ಪಿ ಕಚೇರಿ  ಸೇರಿದಂತೆ ಜನನಿಬಿಡ ಪ್ರದೇಶದಲ್ಲಿ   ಮುಂಜಾಗ್ರತಾ ಕ್ರಮವಾಗಿ ತಪಾಸಣೆ ಮಾಡಲಾಗುವುದು ಎಂದರು.

 

 

ವರದಿ- ಮಾರುತಿ ಪ್ರಸಾದ್ ತುಮಕೂರು 

 

 

 

Leave a Reply

Your email address will not be published. Required fields are marked *