ಅನೇಕ ಮಹನೀಯರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ‍್ಯ ದೊರೆಯಿತು-ಡಾ||ಜಿ.ಪರಮೇಶ್ವರ

ಅನೇಕ ಮಹನೀಯರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ‍್ಯ ದೊರೆಯಿತು-ಡಾ||ಜಿ.ಪರಮೇಶ್ವರ.

 

 

 

 

 

ತುಮಕೂರು -ಬ್ರಿಟೀಷರ ಸರ್ವಾಧಿಕಾರ ಧೋರಣೆಯನ್ನು ಕಿತ್ತೊಗೆಯಲು ಭಾರತೀಯರು ಪಣ ತೊಟ್ಟು ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಭಾಗವಹಿಸಿದ ಅನೇಕ ಮಹನೀಯರ ತ್ಯಾಗ ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ‍್ಯ ದೊರೆಯಿತು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟರು.

 

 

 

 

 

ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಇಂದು ಬೆಳಿಗ್ಗೆ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಧ್ವಜಾ ರೋಹಣ ನೆರವೇರಿಸಿ ರಾಜ್ಯದ ಜನತೆಗೆ ಶುಭಸಂದೇಶ ನೀಡಿ ಮಾತನಾಡಿದರು.

 

 

 

 

ಸ್ವಾತಂತ್ರ‍್ಯ ಹೋರಾಟದ ಮೂಲಕ ದೇಶದ ಸ್ವಾತಂತ್ರ‍್ಯಕ್ಕೆ ಕನಸಿನ ಬೀಜ ಬಿತ್ತಿ ಸ್ವಾಭಿಮಾನದ ಕಿಡಿ ಹೊತ್ತಿಸಿ ಕ್ರಾಂತಿಯ ಚಳವಳಿ ರೂಪಿಸಿದ ಸಾವಿರಾರು ಮಹನೀಯರಲ್ಲಿ ಲಾಲಾ ಲಜಪತರಾಯ್, ಬಾಲಗಂಗಾಧರ ತಿಲಕ್, ಗೋಪಾಲಕೃಷ್ಣ ಗೋಕುಲೆ, ಮೌಲನಾ ಅಬ್ದುಲ್ ಕಲಾಂ ಅಜಾದ್, ಸರ್ಧಾರ್ ವಲ್ಲಾಬಾಯ ಪಟೇಲ್, ಸುಭಾಸ್ ಚಂದ್ರಬೋಸ್, ಸರೋಜಿನಿ ನಾಯ್ಡು ಮುಂತಾದವರು ಒಂದೆಡೆಯಾದರೆ ಮಹಾತ್ಮಗಾಂಧೀಜಿ ಯವರು ಸತ್ಯ ಮತ್ತು ಅಹಿಂಸಾ ಮಾರ್ಗದಲ್ಲಿ ಹೋರಾಡಿ ಸ್ವಾತಂತ್ರ‍್ಯ ತಂದುಕೊಡುವಲ್ಲಿ ಶ್ರಮಿಸಿದ್ದಾರೆ ಎಂದರು.

 

 

 

ಭಾರತ ಸ್ವಾತಂತ್ರ‍್ಯ ಹೋರಾಟದಲ್ಲಿ ನಮ್ಮ ಕರ್ನಾಟಕ ರಾಜ್ಯದ ಪಾತ್ರವೂ ಮಹತ್ವವಾಗಿದ್ದು, 1942ರ ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಪ್ರಪ್ರಥಮ ಬಾರಿಗೆ ಸ್ವತಂತ್ರ ಗ್ರಾಮವೆಂದು ಘೋಷಿಸಿ ಕೊಂಡ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಈಸೂರಿನ ದಂಗೆ ಗಮನಾರ್ಹ ಇತಿಹಾಸ ಸೃಷ್ಟಿಸಿತು ಎಂದರು.1938ರಲ್ಲಿ ತುಮಕೂರು ಜಿಲ್ಲೆಯ ಕುಣಿಗಲ್ ಹಾಗೂ ಮಧುಗಿರಿಯಲ್ಲಿ ಧ್ವಜಸತ್ಯಾಗ್ರಹ, 1939ರಲ್ಲಿ ಶಿರಾದ ಅರಣ್ಯ ಸತ್ಯಾಗ್ರಹ, 1942ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ ಜಿಲ್ಲೆಯ ಟಿ.ಎಂ.ಹನುಮAತಯ್ಯ, ಎ.ವಿ.ಆಚಾರ್,ಖಾದ್ರಿ, ಉತ್ತರ ತುವರಾರು ಜಿಲ್ಲೆ.ಟಿ.ಅನಂತರಾಮಶೆಟ್ಟಿ, ಕೆ.ಎನ್.ನರಸಿಂಹಯ್ಯ, ಕೆ.ಆರ್.ನರಸಿಂಹ ಅಯ್ಯಂ ಗಾರ್, ಅಪ್ಪಾಜಪ್ಪ, ಜಿ.ಆರ್.ಚಂಗಲಾರಾಧ್ಯ,ಚನ್ನಪ್ಪ, ಟಿ.ಆರ್.ಪುಟ್ಟಯ್ಯ,ಎ.ವಿ.ರಾಮರಾವ್,ಬಿ.ರಾಜಪ್ಪ,ಕೊರಟಗೆರೆಯ ಬಸವರಾಧ್ಯ, ಚನ್ನಿಗರಾಮಯ್ಯ, ಮಧುಗಿರಿಯ ಮಾಲಿ ಮರಿಯಪ್ಪ,ಪಾವಗಡದ ಬೂಲಪ್ಪ ಪಿ.ರಾಮರಾವ್, ಶಿರಾದ ಗೋವಿಂದಪ್ಪ ರಾಮಪ್ಪ, ಗುಬ್ಬಿಯ ಜಿ.ಹೆಚ್.ದೇವರು, ಗಂಗಾಧರಪ್ಪ, ಗೋಪಾ ಲಯ್ಯ, ಚಿ.ನಾ.ಹಳ್ಳಿಯ ನಾರಾಯಣರಾವ್, ಹನುಮಂತರಾವ್, ತುರುವೇಕೆರೆಯ ಅನಂತರಾಮಯ್ಯ, ಟಿ.ಸುಬ್ರಹ್ಮಣ್ಯ, ತಿಪಟೂರಿನ ಅನಿವಾಲದ ನಂಜಪ್ಪ,ಟಿ.ಆರ್.ಮಲ್ಲಪ್ಪ, ಕುಣಿಗಲ್‌ನ ಕರಿಯಪ್ಪ, ತಮ್ಮಣ್ಣ ಮುಂತಾದವರು ಸ್ವಾತಂತ್ರ‍್ಯಕ್ಕಾಗಿ ಹೋರಾಡಿ ಜೈಲು ವಾಸ ಅನುಭವಿಸಿದ್ದರು ಎಂದರು.

 

 

 

 

 

ಸ್ವಾತAತ್ರ‍್ಯ ಚಳುವಳಿಯ ಸಂದರ್ಭದಲ್ಲಿ ಮಹಾತ್ಮಗಾಂಧಿಯವರು ಎರಡು ಬಾರಿ ತುಮಕೂರಿಗೆ ಬಂದಿದ್ದು, 1927ರ ಜುಲೈ 16 ಮತ್ತು 1934ರ ಜನವರಿ 4 ರಂದು ತುಮಕೂರಿಗೆ ಆಗಮಿಸಿದ್ದು, ಇಲ್ಲಿ ಸ್ವಾತಂತ್ರ‍್ಯ ಹೋರಾಟದ ರೂಪು ರೇಶೆ ಬಗ್ಗೆ ಸಭೆ ನಡೆಸಿ ಇಲ್ಲಿಯೆ ತಂಗಿದ್ದರು. ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿರುವ ಆ ಜಾಗ ಈಗ ಗಾಂಧಿ ಸ್ಮಾರಕವಾಗಿ ರೂಪುಗೊಂಡಿದೆ ಎಂದರು.ಸ್ವಾತAತ್ರ‍್ಯ ಚಳುವಳಿಗೆ ಕರ್ನಾಟಕ ಹಾಗೂ ತುಮಕೂರು ಜಿಲ್ಲೆಯ ಕೊಡುಗೆ ಅಪಾರವಾಗಿದ್ದು, ಆಡಳಿತ ರೂಢ ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ರಾಜ್ಯದ ಜನರ ಅಭಿವೃದ್ಧಿಗೆ ಕಾರಣವಾಗಿದೆ ಎಂದರು.

 

 

 

 

 

 

ಈ ನಾಡಿನ ಶ್ರೇಷ್ಠ ಸಂತ ನಡೆದಾಡುವ ದೇವದು ಎಂದು ಭಕ್ತರಿಂದ ಕರೆಯಲ್ಪಡುವ ವಿವಿಧ ದಾಸೋಹ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರಸ್ವಾಮೀಜಿಯವರನ್ನು ಭಕ್ತಿ ಪೂರ್ವಕವಾಗಿ ಸ್ಮರಿಸಿಕೊಳ್ಳುವುದಾಗಿ ತಿಳಿಸಿದರು. ತುಮಕೂರು ನಗರ ಕ್ಷೇತ್ರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಆರ್.ರಾಜೇಂದ್ರ, ಬಿ.ಸುರೇಶ್ ಗೌಡ, ಕಾಂಗ್ರೆಸ್ ಮುಖಂಡ ಜಿ.ಚಂದ್ರಶೇಖರಗೌಡ, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿ.ಪಂ. ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಕೆ.ವಿ.ಅಶೋಕ್, ಪಾಲಿಕೆ ಆಯುಕ್ತರಾದ ಬಿ.ವಿ. ಅಶ್ವಿಜಾ, ಅಪರ ಜಿಲ್ಲಾಧಿಕಾರಿ ಡಾ. ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ನಾಹಿದ ಜಮ್ ಜಮ್ ತಹಸೀಲ್ದಾರ್ ಪಿ.ಎಸ್.ರಾಜೇಶ್ವರಿ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *