ಸರ್ಕಾರ ಜನ ವಿರೋಧಿ ಹಾಗೂ ಬಹು ಸಂಖ್ಯಾತರ ವಿರೋಧಿ ಸಮೀಕ್ಷೆ ಮಾಡುತ್ತಿದೆ -ಕೋಲಾರ ಮಾಜಿ ಸಂಸದ ಮುನಿಸ್ವಾಮಿ ಕಿಡಿ.

ಸರ್ಕಾರ ಜನ ವಿರೋಧಿ ಹಾಗೂ ಬಹು ಸಂಖ್ಯಾತರ ವಿರೋಧಿ ಸಮೀಕ್ಷೆ ಮಾಡುತ್ತಿದೆ -ಕೋಲಾರ ಮಾಜಿ ಸಂಸದ ಮುನಿಸ್ವಾಮಿ ಕಿಡಿ.

 

 

ತುಮಕೂರು – ರಾಜ್ಯ ಸರ್ಕಾರದಿಂದ ನಡೆಯುತ್ತಿರುವ ಆರ್ಥಿಕ ಸಾಮಾಜಿಕ ಹಾಗೂ ಶೈಕ್ಷಣಿಕ ಸರ್ವೆಗೆ ಬಿಜೆಪಿ ಪಕ್ಷದ ನಾಯಕರು ಆಕ್ರೋಶ ಹೊರಹಾಕುತ್ತಿದ್ದು. ಇದೇ ಸಂದರ್ಭದಲ್ಲಿ ಕೋಲಾರದ ಮಾಜಿ ಸಂಸದ ಮುನಿಸ್ವಾಮಿ ತುಮಕೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ರಾಜ್ಯ ಸರ್ಕಾರದ ಸಮೀಕ್ಷೆಗೆ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

 

 

 

ಇಡೀ ರಾಜ್ಯದಲ್ಲಿ ಜಾತಿಗಣತಿ ಗೊಂದಲದಿಂದ ನಡೆದಿದೆ ಸರ್ಕಾರದ ವತಿಯಿಂದ ಈ ಹಿಂದೆ ನಡೆಸಿದ ಹಲವು ಆಯೋಗಗಳ ವರದಿ ಸರಿ ಇಲ್ಲ ಅನ್ನೋ ಲೆಕ್ಕಕ್ಕೆ ಬಂದ ಮೇಲೆ ಸರ್ಕಾರ ಮತ್ತೊಂದು ಸಮೀಕ್ಷೆ ಮಾಡಲು ಹೊರಟಿದೆ ಆ ಮೂಲಕ ರಾಜ್ಯ ಸರ್ಕಾರ 15 ದಿನದಲ್ಲಿ ರೋಬೋಟ್ ವರದಿ ಸಿದ್ದ ಮಾಡಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹೊರಟಿದೆ ಎಂದರು.

 

 

 

 

ಈಗಾಗಲೇ ಹಲವು ಸಮುದಾಯಗಳ ಮುಖಂಡರು ಸ್ವಾಮೀಜಿಗಳು ಹಿಂದೂ ಜಾತಿಗಳೊಂದಿಗೆ ಕ್ರೈಸ್ತ ಧರ್ಮ ಸೇರಿಸಿ ಹಿಂದೂ ಧರ್ಮ ಅಳಿಸಲು ಸರ್ಕಾರ ಹೊರಟಿದೆ ಎಂದು ಈಗಾಗಲೇ ಆಕ್ರೋಶ ಹೊರ ಹಾಕುತ್ತಿದ್ದಾರೆ ರಾಜ್ಯ ಸರ್ಕಾರ ಕಾಂಗ್ರೆಸ್ ಹೈಕಮಾಂಡ್ ನ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಮೆಚ್ಚಿಸಲು ಸಮೀಕ್ಷೆ ನಡೆಸುತ್ತಿದ್ದಾರೆ.

 

 

 

 

 

ಇನ್ನು ಡಿ.ಕೆ ಶಿವಕುಮಾರ್ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡೋ ಸಂದರ್ಭದಲ್ಲಿ ಈಗ ಜಾತಿ ಗಣತಿ ತಂದು ಸಿದ್ದರಾಮಯ್ಯ ಹೈಕಮಾಂಡ್ ಮೆಚ್ಚಿಸಲು ಕ್ರೈಸ್ತ ಜಾತಿ ತಂದು ಹಿಂದೂ ಧರ್ಮವನ್ನು ಹೊಡೆಯಲು ಹೊರಟಿದ್ದಾರೆ ಎಂದರು.

 

 

 

ಇನ್ನು ಎಲ್ಲಾ ಜಾತಿಗಳ ಜೊತೆಗೆ ಕ್ರೈಸ್ತ ಜಾತಿ ಸೇರಿಸಿದ್ದು ಅದರ ವಿರುದ್ಧ ರಾಜ್ಯದಲ್ಲಿ ಕೂಗು ಹೆಚ್ಚಾಗುತ್ತಿದ್ದಂತೆ ಎಲ್ಲ ಜಾತಿಗಳೊಂದಿಗೆ ಸೇರಿಸಿದ್ದ ಕ್ರೈಸ್ತ ಹೆಸರನ್ನ ಕೈಬಿಟ್ಟು ಈಗ ರಾಜ್ಯದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಎಸ್ಸಿ,ಎಸ್ಟಿ ಸಮುದಾಯದೊಂದಿಗೆ ಕ್ರೈಸ್ತ ಹೆಸರನ್ನ ಸೇರಿಸಿ ಬೃಹತ್ ಜನಸಂಖ್ಯೆ ಹೊಂದಿರುವ ಸಮುದಾಯವನ್ನು ಹೊಡೆಯಲು ಸಿದ್ದರಾಮಯ್ಯ ಹೊರಟಿದ್ದಾರೆ ಎಂದರು.

 

 

 

 

ಇನ್ನು ರಾಜ್ಯ ಸರ್ಕಾರಕ್ಕೆ ಹಿಂದೂ ಧರ್ಮದ ವಿವಿಧ ಜಾತಿಗಳೊಂದಿಗೆ ಕ್ರೈಸ್ತ ಹೆಸರನ್ನ ಸೇರಿಸುವ ಬದಲು ಮುಸಲ್ಮಾನ್ ಕ್ರಿಶ್ಚಿಯನ್ ಎಂದು ಹೆಸರು ಸೇರಿಸಲು ರಾಜ್ಯ ಸರ್ಕಾರಕ್ಕೆ ಧೈರ್ಯ ಇಲ್ಲವೇ ಎಂದಿದ್ದಾರೆ. ವೋಟು ಹಾಕಿಸಿಕೊಂಡು ಅಧಿಕಾರಕ್ಕೆ ಬಂದು ಕುರ್ಚಿ ಉಳಿಸಿಕೊಳ್ಳಲು ಇಟಲಿ ಮೇಡಂ, ಕ್ರೈಸ್ತ ಹಾಗೂ ಮುಸ್ಲಿಂ ಸಮುದಾಯದ ಓಲೈಕೆಗೆ ಸರ್ಕಾರ ಮುಂದಾಗಿದೆ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿಗಣತಿ ಸರಿಯಾಗಿಲ್ಲ ಇನ್ನು ದಸರಾ ಹಬ್ಬದ ಆಚರಣೆ ವೇಳೆ ಹಿಂದೂ ಸಮುದಾಯದ ಬಹುತೇಕರು ಉಪವಾಸ, ನವರಾತ್ರಿ ಹಬ್ಬದ ಆಚರಣೆ ಹಾಗೂ ಸ್ವರ್ಗಸ್ತರಾಗಿರುವ ಮಂದಿಗೆ ನಾವು ಪೂಜೆ ಮಾಡುವ ಸಂದರ್ಭದಲ್ಲಿ ಎಸ್ಸಿ ಎಸ್ಟಿ ಸಮುದಾಯಕ್ಕೆ ಪಿಂಡ ಬಿಡುವ ಕೆಲಸ ಸರ್ಕಾರ ಮಾಡುತ್ತಿದೆ ಈ ಮೂಲಕ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತುಘಲಕ್ ಹಾಗೂ ಹಿಟ್ಲರ್ ಆಡಳಿತ ನಡೆಸುತ್ತಿದೆ ಎಂದಿದ್ದಾರೆ.

 

 

 

 

 

ರಾಜ್ಯದಲ್ಲಿ ಬಹುತೇಕ ದಲಿತ ಸಮುದಾಯದ ಮುಖಂಡರು ಹಾಗೂ ಜನರು ಸಿದ್ದರಾಮಯ್ಯ ಒಂದು ತರಹ ಖಳನಾಯಕ ಯಾಕೆಂದರೆ ಹಿಂದೆ ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತರಲು ಶ್ರಮಿಸಿದವರು ಪರಮೇಶ್ವರವರು ರಾಜ್ಯದ ಸಿಎಂ ರೇಸ್ ನಲ್ಲಿ ಇದ್ದವರನ್ನು ಸೋಲಿಸಿದ್ದು ಆನಂತರ ಮಲ್ಲಿಕಾರ್ಜುನ ಖರ್ಗೆ ರವರನ್ನ ದೆಹಲಿಗೆ ಓಡಿಸಿರುವ ಸಿದ್ದರಾಮಯ್ಯ ದಲಿತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದರು.

 

 

 

 

 

ಹಾಗಾಗಿ ಈ ಕೂಡಲೇ ರಾಜ್ಯ ಸರ್ಕಾರ ನಡೆಸುತ್ತಿರುವ ಸಮೀಕ್ಷೆಯನ್ನು ಕೈ ಬಿಟ್ಟು ಹೆಚ್ಚು ದಿನಗಳನ್ನ ಮೀಸಲಿಟ್ಟು ಸಮೀಕ್ಷೆ ನಡೆಸಬೇಕು ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ವೈಎಚ್ ಹುಚ್ಚಯ್ಯ ಜಗದೀಶ್, ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

 

 

ವರದಿ -ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *