ಜನ ಔಷಧಿ ಕೇಂದ್ರ ಮುಂದುವರಿಸಲು ಬಿಜೆಪಿ ಪಕ್ಷದಿಂದ ಪ್ರತಿಭಟನೆ.

ಜನ ಔಷಧಿ ಕೇಂದ್ರ ಮುಂದುವರಿಸಲು ಬಿಜೆಪಿ ಪಕ್ಷದಿಂದ ಪ್ರತಿಭಟನೆ.

 

 

 

ತುಮಕೂರು_ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ರೋಗಿಗಳಿಗೆ ಆಗ್ಗದ ದರದಲ್ಲಿ ಔಷಧಿಗಳು ಸಿಗುತ್ತಿದ್ದ ಜನೌಷಧಿ ಕೇಂದ್ರಗಳನ್ನ ಕಾಂಗ್ರೆಸ್ ನೇತೃತ್ವದ ಸರ್ಕಾರ ಬಂದ್ ಮಾಡಲು ಹೊರಟಿದ್ದು ಇದರ ವಿರುದ್ಧ ಇಂದು ತುಮಕೂರಿನ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಬಿಜೆಪಿ ಪಕ್ಷದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

 

 

 

 

 

 

ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ ಸುರೇಶ್ ಗೌಡ ಮಾತನಾಡಿ ಬಡವರ ಪಾಲಿಗೆ ಕಡಿಮೆ ದರದಲ್ಲಿ ವಿವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗಳಿಗೆ ಜನ ಔಷಧಿ ಕೇಂದ್ರದಿಂದ ಉತ್ತಮ ಔಷಧಿಗಳನ್ನ ಕಡಿಮೆ ಬೆಲೆಗೆ ನೀಡಲಾಗುತ್ತಿದ್ದ ಅಂಥಹ ಕೇಂದ್ರಗಳನ್ನ ರಾಜ್ಯ ಸರ್ಕಾರ ಬಂದ್ ಮಾಡಲು ಹೊರಟಿರುವುದು ನಿಜಕ್ಕೂ ನೋವಿನ ಸಂಗತಿ ಕೂಡಲೇ ಜನೌಷಧಿ ಕೇಂದ್ರಗಳನ್ನು ಪ್ರಾರಂಭ ಮಾಡಬೇಕು ಹಾಗೂ ಹೊಸ ಜನೌಷಧಿ ಕೇಂದ್ರಗಳನ್ನ ತೆರೆಯಲು ಕ್ರಮ ಕೈಗೊಳ್ಳಬೇಕು ಎಂದು ಅವರು

 

 

 

 

ಒಂದು ವೇಳೆ ಔಷಧಿ ಕೇಂದ್ರವನ್ನ ಬಂದ್ ಮಾಡಿದ್ದೆ ಆದರೆ ರಾಜ್ಯದ್ಯಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರವರಿಗೆ ತಮ್ಮ ಪ್ರತಿಭಟನೆಯ ಬಿಸಿಯನ್ನ ಮುಟ್ಟಿಸುವುದಾಗಿ ತಿಳಿಸಿದರು.

 

 

 

 

ಇನ್ನೂ ರಾಜ್ಯದಲ್ಲಿ ಬಾಣಂತಿಯರು ನಿಗೂಢವಾಗಿ ಸಾವನ್ನಪ್ಪುತ್ತಿದ್ದರು ಸಹ ಅದರ ಬಗ್ಗೆ ಗಮನಹರಿಸದ ಸರ್ಕಾರ ಮತ್ತು ಆರೋಗ್ಯ ಇಲಾಖೆ ಏಕಾಏಕಿ ಜನ ಔಷಧಿ ಕೇಂದ್ರಗಳನ್ನ ಬಂದ್ ಮಾಡಲು ಹೊರಟಿರುವುದು ಒಳ್ಳೆಯ ಬೆಳವಣಿಗೆಯಲ್ಲ ರಾಜ್ಯದಲ್ಲಿ ಬಾಣಂತಿಯರು ಹಾಗೂ ಮಕ್ಕಳು ಸಾವನ್ನಪ್ಪುತ್ತಿದ್ದು ಇದಕ್ಕೆ ಹೊಣೆ ಯಾರು ಎಂದು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

 

 

 

 

 

 

 

 

ಇದೇ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಹೆಬ್ಬಾಳ ರವಿಶಂಕರ್ ಟಿ ಆರ್ ಸದಾಶಿವಯ್ಯ ಸೇರಿದಂತೆ ಹಲವು ಬಿಜೆಪಿ ಮುಖಂಡರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

 

 

 

Leave a Reply

Your email address will not be published. Required fields are marked *