ಗೃಹಸಚಿವರ ತವರಲ್ಲಿ ಪಶುಪಾಲನಾ ಇಲಾಖಾ ಅಧಿಕಾರಿಗಳ ಅಂದಾ ದರ್ಭಾರ್: ಅವಧಿ ಮೀರದ ಲಕ್ಷಾಂತರ ರೂ ಸಿರೆಂಜ್ ಸುಡಲು ಅನುಮತಿ ಕೊಟ್ಟವರಾರು?????

ಗೃಹಸಚಿವರ ತವರಲ್ಲಿ ಪಶುಪಾಲನಾ ಇಲಾಖಾ ಅಧಿಕಾರಿಗಳ ಅಂದಾ ದರ್ಭಾರ್: ಅವಧಿ ಮೀರದ ಲಕ್ಷಾಂತರ ರೂ ಸಿರೆಂಜ್ ಸುಡಲು ಅನುಮತಿ ಕೊಟ್ಟವರಾರು??????

 

ತುಮಕೂರು -ಗೃಹಸಚಿವರ ತವರು ಜಿಲ್ಲೆ ತುಮಕೂರಿನಲ್ಲಿ ಪಶುಪಾಲನಾ ಹಾಗೂ ಪಶುವೈದ್ಯಕೀಯ ಕಚೇರಿಯಲ್ಲಿ ಅಧಿಕಾರಿಗಳ ಅಂದಾ ದರ್ಭಾರ್ ಎಲ್ಲೆ ಮೀರಿದೆ……

 

 

 

 

ಅವಧಿ ಮೀರದೆ ಇರುವ ಸಾವಿರಾರು ರೂ ಮೌಲ್ಯದ ಸಿರೆಂಜ್ ಗಳನ್ನು ಹಳೇ ಗೋಡೋನ್ ದುರಸ್ತಿ ಮಾಡುವ ನೆಪದಲ್ಲಿ ಗೋಡೋನ್ ನಲ್ಲಿ ಶೇಖರಿಸಿದ್ದ ಅವಧಿ ಮೀರದೆ ಇರುವ 2027- 2028 ರವರೆಗೂ ಅವಧಿಯಿರುವ ಲಕ್ಷಾಂತರ ರೂ ಮೌಲ್ಯದ ಸಿರೆಂಜ್ ಗಳನ್ನು ಬೆಂಕಿಗಾಹುತಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿರುವ ಘಟನೆ ಬೆಳಕಿಗೆ ಬಂದಿದೆ.

 

 

 

 

 

oplus_0

ಮಂಗಳವಾರ ಮಧ್ಯಾಹ್ನ ಪಶುಪಾಲನಾ ಇಲಾಖೆ ಆವರಣದಲ್ಲೆ ಗೋಡೋನ್ ನಲ್ಲಿ ದೊಡ್ಡ ದೊಡ್ಡ ಬಾಕ್ಸ್ಗಳಲ್ಲಿದ್ದ ಅವಧಿ ಮೀರದ ಸಿರಂಜ್ ಗಳನ್ನು ಅನುಪಯುಕ್ತವೆಂದು ಬೆಂಕಿಗೆ ಹಾಕಲಾಗಿದೆ,ಜಿಲ್ಲೆಯಾದ್ಯಂತ ಪಶುಆಸ್ಪತ್ರೆಗೆ ರವಾನೆಯಾಗಬೇಕಾಗಿದ್ದ ಈ ಸಿರಂಜ್ ಗಳು ಅನುಪಯುಕ್ತ ವಸ್ತುಗಳೆಂದು ಪರಿಗಣಿಸಿ ಬೆಂಕಿಗಾಹುತಿ ಮಾಡಿರುವುದು ಸಾಕಷ್ಟು ಅನುಮಾನಕ್ಕೂ ಕಾರಣವಾಗಿದೆ.

 

 

 

 

oplus_0

ಸಿರೆಂಜ್ ಸುಡುವ ವಿಚಾರ ತಿಳಿದ ಕೂಡಲೇ ಸ್ತಳಕ್ಕೆ ಪತ್ರಕರ್ತರು ಭೇಟಿ ನೀಡಿದಾಗ ಪಶುಪಾಲನಾ ಇಲಾಖೆ ಅಧಿಕಾರಿಗಳ ಅಸಲೀ ಮುಖ ಅನಾವರಣಗೊಂಡಿದೆ,ಪತ್ರಕರ್ತರೇ ಖುದ್ದು ಪರಿಶೀಲಿಸಿದಾಗ ಬೆಂಕಿಗಾಹುತಿಯಾಗುತ್ತಿದ್ದ ಸಿರೆಂಜ್ ಗಳು 2027- 2028 ಅವಧಿ ಹೊಂದಿವೆ ಬೆಂಕಿ ಹಾಕಿ ನಾಶಪಡಿಸುತ್ತಿರುವುದೇಕೆ ಎಂದು ಪ್ರಶ್ನಿಸಿದಾಗ ಡಿ ಗ್ರೂಪ್ ನೌಕರ, ಸ್ಟೋರ್ ಇನ್ಚಾರ್ಜ್ ಅವಧಿ ಮೀರಿವೆ ನಾಶಪಡಿಸುತ್ತಿದ್ದೇವೆ ಎಂದು ಬೇಜವಾಬ್ದಾರಿ ಉತ್ತರ ನೀಡಿ ಜಾರಿಕೊಂಡರು.

 

ಉಡಾಪೆ ಉತ್ತರ ಕೊಟ್ಟ ಉಪನಿರ್ದೇಶಕ ಶಿವಪ್ರಸಾದ್….

ಲಕ್ಷಾಂತರ ರೂ ಮೌಲ್ಯದ ಅವಧಿ ಮೀರದ ಸಿರೆಂಜ್ ಗಳನ್ನು ಸುಟ್ಟಿರುವ ಸಂಬಂದ ಪಶುಪಾಲನಾ ಇಲಾಖೆ ಉಪನಿರ್ದೇಶಕ ಶಿವಪ್ರಸಾದ್ ಅವರನ್ನು ಪತ್ರಿಕೆ ಪ್ರಶ್ನಿಸಿದಾಗ ನಾವು ಕೇವಲ 15 ಬಾಕ್ಸ್ ಮಾತ್ರ ಅವಧಿ ಮೀರಿರುವ ಸಿರೆಂಜ್ ಸುಟ್ಟಿದ್ದೇವೆ,ಸಿರೆಂಜ್ ಸುಡಲು ನಾನು ಯಾರಿಗೂ ಅನುಮತಿ ನೀಡಿಲ್ಲ ಎಂದು ಉಡಾಫೆ ಉತ್ತರ ನೀಡಿ ನುಣುಚಿಕೊಂಡರು,ಇಲಾಖೆ ಅದೀನಾಧಿಕಾರಿಗಳು ಉನ್ನತಾಧಿಕಾರಿಗಳ ಆದೇಶವಿಲ್ಲದೇ ಇಂತಹ ಕೃತ್ಯ ಮಾಡಬಹುದೇ,ಇವರಿಗೆ ಅಧಿಕಾರ ಕೊಟ್ಟವರಾರು,ಉಪನಿರ್ದೇಶಕರು ಸೇರಿದಂತೆ ಇಲಾಖೆ ಎಲ್ಲಾ ಅಧಿಕಾರಿಗಳ ಮೇಲೆ ತನಿಖೆ ನಡೆದರೆ ಸತ್ಯ ಹೊರಬೀಳುತ್ತದೆ.

oplus_0

ಅದೇನೇ ಇರಲಿ ಮುಖಪ್ರಾಣಿಗಳಿಗೆ ಚಿಕಿತ್ಸೆಗಾಗಿ ಸರ್ಕಾರ ನೀಡುವ ಇಂತಹ ವಸ್ತುಗಳನ್ನು ಬೇಜವಾಬ್ದಾರಿ ಅಧಿಕಾರಿಗಳು ಈ ರೀತಿ ದುರ್ಬಳಕೆ ಮಾಡಿರುವುದು ಸಾಕಷ್ಟು ಅನುಮಾನ ಹುಟ್ಟು ಹಾಕಿದೆ.

 

 

 

 

ಕೂಡಲೇ ಪಶು ಸಂಗೋಪನೆ ಇಲಾಖೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳುವರೇ ಕಾದು ನೋಡಬೇಕಿದೆ.

 

ವರದಿ -ಮಾರುತಿ ಪ್ರಸಾದ್ ತುಮಕೂರು.

Leave a Reply

Your email address will not be published. Required fields are marked *