ಸಾರ್ವಜನಿಕವಾಗಿ ಲಾಂಗ್ ಹಿಡಿದು ಹಫ್ತಾ ವಸೂಲಿಗೆ ಹೋದವರ ಮೇಲೆ ದಾಖಲಾಯಿತು ಎಫ್. ಐ.ಆರ್.

ತುಮಕೂರು _ ಊಟ ಮುಗಿಸಿ ಮನೆಯಿಂದ ಹೊರಗೆ ಕುಳಿತಿದ್ದ ವ್ಯಕ್ತಿಯ ಮೇಲೆ ಪುಂಡರು ಲಾಂಗ್ ಹಿಡಿದು ಸಾರ್ವಜನಿಕವಾಗಿ ಓಡಾಡುತ್ತಾ ವ್ಯಾಪಾರಿಯ ಮೇಲೆ ಲಾಂಗ್ ಬೀಸಿದ್ದು ಗಲಾಟೆ ತಡೆಯಲು ಹೋದ ಪೊಲೀಸ್ ಸಿಬ್ಬಂದಿಗಳ ಮೇಲೆಯು ಹಲ್ಲೆ ಮಾಡಲು ಮುಂದಾದ ಪುಂಡರ ಮೇಲೆ ಎಫ್. ಐ.ಆರ್ ದಾಖಲಾಗಿರುವ ಘಟನೆ ವರದಿಯಾಗಿದೆ.

ತುಮಕೂರು ನಗರದ ಮಳೆಕೋಟೆ ಮುಖ್ಯ ರಸ್ತೆಯಲ್ಲಿರುವ ಟೀ ಅಂಗಡಿ ಯೊಂದರ ಸಮೀಪ ಎಂದಿನಂತೆ ಕೆಲಸ ಮುಗಿಸಿ ಮನೆಗೆ ಮರಳಿದ್ದ ಆಟೋ ಕನ್ಸಲ್ಟೆನ್ಸಿ ಮಾಲಿಕ ಖಾದರ್ ಎಂಬಾತ ಮನೆ ಸಮೀಪ ಕುಳಿತಿದ್ದ ವೇಳೆ ಅಲ್ಲಿಗೆ ಆಗಮಿಸಿದ ಅಜ್ಜು ಸೇರಿದಂತೆ ಆರು ಮಂದಿ ಏಕಾಏಕಿ ಖಾದರ್ ಮೇಲೆ ಗಲಾಟೆಗೆ ಹೋದ ಪುಂಡರು ನಜರಾಬಾದ್ ನಲ್ಲಿ ನೀನು ವ್ಯಾಪಾರ ಮಾಡುವುದಾದರೆ ನಮಗೆ ಪ್ರತಿ ತಿಂಗಳು 5000 ಹಫ್ತಾ ನೀಡುವಂತೆ ಒತ್ತಾಯ ಮಾಡಿ ಗಲಾಟೆಗೆ ಮುಂದಾದ ವೇಳೆ ಪ್ರತಿರೋಧ ಒಡ್ಡಿದ್ದ ಖಾದರ್ ಮೇಲೆ ಲಾಂಗ್ ಬೀಸಿ,ಚೇರ್ ಹೊಡೆದು ಹಾಕಿ ಪರಾರಿಯಾಗಿದ್ದರು .

ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸುವ ವೇಳೆ ಪೊಲೀಸ್ ಮಹಿಳಾ ಪಿಎಸ್ಐ ಹಾಗೂ ಪೊಲೀಸ್ ಪೇದೆಗಳ ಮೇಲೆಯೇ ಹಲ್ಲೆಗೆ ಮುಂದಾಗಿದ್ದು ಈ ಎಲ್ಲಾ ಘಟನೆ ಸ್ಥಳೀಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಹಲ್ಲೇಗೆ ಒಳಗಾದ ಖಾದರ್ ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಹಲ್ಲೇ ಮಾಡಿದ್ದ ಪುಂಡರಾದ ರೆಹಮತ್, ಅಜ್ಜೂ , ಶಬು,ತಬ್ರೆಜ್,ಇಮ್ರಾನ್,ಇರ್ಫಾನ್, ಸೇರಿದಂತೆ ಆರು ಮಂದಿ ಮೇಲೆ ತುಮಕೂರು ನಗರದ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇನ್ನು ಸಾರ್ವಜನಿಕವಾಗಿ ಲಾಂಗ್ ಹಿಡಿದು ಸಾರ್ವಜನಿಕರಿಗೆ ಭಯ ಹುಟ್ಟಿಸಿದ್ದ ಪುಂಡರ ಮೇಲೆ ಬರೋಬ್ಬರಿ ಯು/ಎಸ್ 189(2),184(4),191(2),192(3),308(5),351(5),118(1),352,324,54,190 ), ARMS ACT,1959,,(ಯು/s -27) ಒಳಗೊಂಡಂತೆ 12 ಸೆಕ್ಷನ್ ಗಳಲ್ಲಿ ಎಫ್ ಐ ಆರ್ ದಾಖಲಾಗಿದೆ.
ಪದೇಪದೇ ತುಮಕೂರು ನಗರದ ಹಲವಡೆ ಪುಂಡರು ಭಯವಿಲ್ಲದೆ ಸಾರ್ವಜನಿಕವಾಗಿ ಹಲ್ಲೆ ,ಧಮ್ಕಿ ಹಾಕುವ ಪ್ರಕರಣಗಳು ವರದಿಯಾಗುತ್ತಿದ್ದು ಇದೇ ಘಟನೆ ನಡೆದ ಕೂದಲೇಲೆ ಅಂತರದಲ್ಲಿ ಇರುವ ಸಮೋಸ ಸೆಂಟರ್ ಒಂದರಲ್ಲಿ ಪುಂಡರು ಲಾಂಗ್ ಹಿಡಿದು ಯುವಕನ ಮೇಲೆ ಹಲ್ಲೆ ಮಾಡಿದ್ದ ಘಟನೆ ಮಾಸುವ ಮೊದಲೇ ಮತ್ತೊಂದು ಘಟನೆ ವರದಿಯಾಗಿದ್ದು ಮತ್ತಷ್ಟು ಆತಂಕ ಹೆಚ್ಚು ಮಾಡಿದೆ ಕೂಡಲೇ ಪೊಲೀಸರು ಇಂತಹ ಘಟನೆಗಳು ಮರುಕಳಿಸಿದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹ.
ಅದೇನೆ ಇರಲಿ ಸಾರ್ವಜನಿಕವಾಗಿ ಮಾರಕಾಸ್ರ ಹಿಡಿದು ಓಡಾಡುತ್ತಿದ್ದ ಪುಂಡರ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಸಫಲವಾಗಿದ್ದು. ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.
ವರದಿ -ಮಾರುತಿ ಪ್ರಸಾದ್ ತುಮಕೂರು.
