ಕೆ.ಎನ್ ರಾಜಣ್ಣ ಕಾರ್ಯಕ್ರಮ ಮುಂದೂಡಿಕೆ.

ತುಮಕೂರು : ಕೆ ಎನ್ ರಾಜಣ್ಣ ನವರ 75 ನೇ ವರ್ಷದ ಜನ್ಮ ದಿನದ ಪ್ರಯುಕ್ತ ಅಭಿನಂದನಾ ಗ್ರಂಥ ಬಿಡುಗಡೆ ಹಾಗೂ ಅಮೃತಮಹೋತ್ಸವವನ್ನು ಕಾರ್ಯಕ್ರಮ ವನ್ನು ಮೇ 13 ರಂದು ಹಮ್ಮಿಕೊಳ್ಳಲಾಗಿತ್ತು. ದೇಶದಲ್ಲಿ ಯುದ್ದ ವಾತಾವರಣ ಇರುವುದರಿಂದ ಕಾರ್ಯಕ್ರಮ ವನ್ನು ಮುಂದೂಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದರು.
ಅವರು ಇಂದು ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ದೇಶದ ಸೈನಿಕರು ಯುದ್ದದ ಸನ್ನಿವೇಶ ಇರುವುದರಿಂದ ನಾವು ಸೈನಿಕರಗೆ ಗೌರವವನ್ನು ಸಲ್ಲಿಸಬೇಕಾಗಿರುವುದರಿಂದ ಈ ಕಾರ್ಯಕ್ರಮ ವನ್ನು ಅನಿರ್ದಿಷ್ಟ ವಾಗಿ ಮುಂದೂಡಲಾಗಿದೆ ಎಂದು ಹೇಳಿದರು.
ಕೆ ಎನ್ ರಾಜಣ್ಣ ನವರ ಹಿತೈಷಿಗಳು, ಸ್ನೇಹಿತರು ಕಳದ ಎರಡು ತಿಂಗಳುಗಳಿಂದ ಕೆಲಸ ಮಾಡುತ್ತಿದ್ದರು ,ಅಭಿನಂದನಾ ಗ್ರಂಥ ಕ್ಕಾಗಿ ಎರಡು ವರ್ಷಗಳಿಂದ ಸಾಹಿತಿಗಳು ಕೆಲಸ ಮಾಡಿದ್ದರು.
ಗಡಿಯಲ್ಲಿ ಉದ್ವಿಗ್ನ ವಾತಾವರಣ ಇರುವುದರಿಂದ ಕಾರ್ಯಕ್ರಮ ನಡೆಸುವುದು ಸೂಕ್ತವಲ್ಲ ಮೊದಲು ದೇಶ ನಂತರ ಕಾರ್ಯಕ್ರಮ ಎಂಬ ತೀರ್ಮಾನಕ್ಕೆ ಬಂದಿರುವುದರಿಂದ ಯುದ್ದ ವಾತವರಣ ಮುಗಿದ ಬಳಿಕ ಮತ್ತೆ ಕೆ ಎನ್ ಆರ್ ರಾಜಣ್ಣ ರವರ 75 ನೇ ವರ್ಷದ ಅಮೃತಮಹೋತ್ಸವ ಕಾರ್ಯಕ್ರಮ ನಡೆಸಲಾಗುವುದು ಎಂದು ರಾಜೇಂದ್ರ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಜಾಪ್ರಗತಿ ಸಂಪಾದಕ ನಾಗಣ್ಣ,ಧನಿಯಕುಮಾರ್,ಗೆಳಯರ ಬಳಗದ ಗೋವಿಂದರಾಜು,ಮುರುಳಿಕೃಷ್ಣ,ನಾರಾಯಣ ಗೌಡ,ಲಕ್ಷ್ಮಿ ನಾರಾಯಣ್,ಪಿ ಮೂರ್ತಿ,ಕೊಟ್ಟಶಂಕರ್,ಟಿ ಪಿ ಮಂಜುನಾಥ್, ಕಲ್ಲಹಳ್ಳಿ ದೇವರಾಜು ಮತ್ತಿತರರು ಇದ್ದರು.
